ಧಾರವಾಡ –
ಧಾರವಾಡದ ಕವಲಗೇರಿ ಗ್ರಾಮದಲ್ಲಿ ಪತ್ತೆಯಾಗಿದ್ದು ಕತ್ತೆ ಕಿರುಬ ಎಂದು ಅರಣ್ಯ ಇಲಾಖೆಯ ಅಧಿಕಾರಿ ಯಶಪಾಲ್ ಕ್ಷೀರಸಾಗರ ಹೇಳಿದ್ದಾರೆ ಸುದ್ದಿ ಸಂತೆ ಯೊಂದಿಗೆ ಮಾತ ನಾಡಿದ ಅವರು ಹೆಜ್ಜೆ ಗುರುತಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಒಂದು ಪತ್ತೆಯನ್ನು ಮಾಡಿದ್ದಾರೆ ಎಂದರು
ಕಳೆದ ಒಂದು ವಾರದಿಂದ ಈ ಒಂದು ಪತ್ತೆ ಕಾರ್ಯವನ್ನು ಇಲಾಖೆಯ ಅಧಿಕಾರಿಗಳು ಮಾಡಿದ್ದು ಸ್ಥಳದಲ್ಲೇ ಸಿಕ್ಕ ಹೆಜ್ಜೆ ಗುರುತುಗಳಿಂದ ಕಂಡು ಬಂದಿದ್ದು ಹೀಗಾಗಿ ಶೀಘ್ರ ದಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಂದರು.ಕತ್ತೆ ಕಿರುಬ ಇಂಡಿಯನ್ ಹೈನಾ ಆಗಿದ್ದು ಇತ್ತೀಚಿಗೆ ಚಿರತೆ ದಾಳಿ ಎಂದು ಹೇಳಲಾಗಿತ್ತು ಆದರೆ ಇದೊಂದು ಕಾಡು ಪ್ರಾಣಿಯಾಗಿದ್ದು ಕತ್ತೆಕಿರುಬ ಇರಬಹುದು ಎಂದು ಅರಣ್ಯ ಇಲಾಖೆಯವರು ಪತ್ತೆ ಮಾಡಿದ್ದು ಶೀಘ್ರದಲ್ಲೇ ಹಿಡಿಯ ಲಾಗುವುದು ಎಂದಿದ್ದಾರೆ