ಮುಂಬಯಿ –
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತದ ಅಮರ ದನಿ,ಭಾರತರತ್ನ ಲತಾ ಮಂಗೇಶ್ಕರ್ ವಿಧಿವಶರಾಗಿದ್ದಾರೆ.ಕಳೆದ ಹಲವು ದಿನಗಳಿಂದ ಅನಾರೋ ಗ್ಯದಿಂದ ಬಳಲುತ್ತಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ನಿಧನರಾಗಿದ್ದಾರೆ.92ನೇ ವಯಸ್ಸಿನಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಕಳೆದ ಹಲವಾರು ದಿನಗಳಿಂದ ಇವರು ಗುಣಮುಖ ರಾಗಲಿ ಎಂಷು ಅಭಿಮಾನಿಗಳು,ಕುಟುಂಬ ವರ್ಗದವರು ಪ್ರಾರ್ಥನೆ ಮಾಡಿದ್ದರು ಆ ಪ್ರಾರ್ಥನೆ ಫಲಿಸಲಿಲ್ಲ
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡರೂ ಲತಾ ಅವರ ಆರೋಗ್ಯ ಕ್ಷೀಣಿಸಿ,ಇಹಲೋಕವನ್ನು ತೊರೆದಿದ್ದಾರೆ. ಲತಾ ಅವರು ಸಹೋದರಿಯರಾದ ಉಷಾ ಮಂಗೇಶ್ಕರ್, ಮೀನಾ ಖಾಡಿಕರ್ ಮತ್ತು ಆಶಾ ಭೋಂಸ್ಲೆ ಸೇರಿದಂತೆ ಅಪಾರ ಅಭಿಮಾನಿ ವರ್ಗವನ್ನು ತೊರೆದಿದ್ದಾರೆ.
1929ರ ಸೆಪ್ಟೆಂಬರ್ 28ರಂದು ಜನಿಸಿ ಲತಾ ಅವರ ಮೊದಲ ಹೆಸರು ಹೇಮಾ ಮಂಗೇಶ್ಕರ್ ಸುಮಾರು 36 ಕ್ಕೂ ಹಾಡುಗಳಿಗೆ ದನಿ ನೀಡಿದ ಕೀರ್ತಿ ಲತಾ ಅವರದ್ದು ಸಂಗೀತ ನಿರ್ದೇಶಕರಾಗಿಯೂ ಲತಾ ಅವರು ಚಿತ್ರರಂಗ ದಲ್ಲಿ ಸೇವೆ ಸಲ್ಲಿಸಿದ್ದರು.
ಲತಾ ಮಂಗೇಶ್ಕರ್ ಅವರ ಸಾಧನೆಗೆ ಮನ್ನಣೆ ನೀಡಿ ಭಾರತ ಸರ್ಕಾರವು 2001ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಪ್ರಧಾನ ಮಾಡಿ ಗೌರವಿಸಿತ್ತು ಚಿತ್ರರಂಗದಲ್ಲಿನ ಸೇವೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 1989ರಲ್ಲಿ ಲತಾ ಅವರು ಪಡೆದಿ ದ್ದರು.ಇದಲ್ಲದೆ ಪದ್ಮಭೂಷಣ,ಪದ್ಮವಿಭೂಷಣ ಸೇರಿ ದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.ಮೂರು ರಾಷ್ಟ್ರ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಲತಾ ಮಂಗೇ ಶ್ಕರ್ ಮುಡಿಗೇರಿದೆ.ಕನ್ನಡಲ್ಲೂ ‘ಬೆಳ್ಳನೆ ಬೆಳಗಾಯಿತು’ ಎನ್ನುವ ಒಂದೇ ಒಂದು ಕನ್ನಡ ಹಾಡನ್ನು ಹಾಡಿದ್ದಾರೆ
ಭೀಗಿ ರಾತೊನ್ ಮೇ,ತೇರೆ ಬಿನಾ ಜಿಂದಗಿ ಸೇ,ತುಮ್ ಆ ಗಯೇ ಹೋ ನೂರ್ ಆ ಗಯಾ, ಕೋರಾ ಕಾಗಜ್, ನೈನಾ ಬರ್ಸೆ ರಿಮ್ ಜಿಮ್, ತೂ ಜಹಾನ್ ಜಹಾನ್ ಚಲೇಗಾ, ಇನ್ಹಿ ಲೋಗೋನ್ ನೆ, ಲಗ್ ಜಾ ಗಲೇ ಸೆ ಫಿರ್, ದೇಖಾ ಏಕ್ ಖ್ವಾಬ್ ಮುಂತಾದ ಹಾಡುಗಳನ್ನು ಮರೆಯಲು ಸಾಧ್ಯವಿಲ್ಲ.ಶಂಕರ್ ಜೈಕಿಶನ್, ನೌಶಾದ್ ಅಲಿ, ಎಸ್‌ಡಿ ಬರ್ಮನ್, ಸರ್ದುಲ್ ಸಿಂಗ್ ಕ್ವಾತ್ರಾ, ಅಮರನಾಥ್, ಹುಸೆನ್‌ಲಾಲ್, ಸಿ. ರಾಮಚಂದ್ರ, ಹೇಮಂತ್ ಕುಮಾರ್, ಸಲೀಲ್ ಚೌಧರಿ, ದತ್ತಾ ನಾಯಕ್, ಖಯ್ಯಾಮ್, ರವಿ, ಸಜ್ಜದ್ ಹುಸೇನ್, ರೋಷನ್, ಕಲ್ಯಾಣ್‌ಜಿ-ಆನಂದಜಿ, ವಸಂತ ದೇಸಾಯಿ ಮುಂತಾದ ಸಂಗೀತ ಸಂಯೋಜಕರ ಹಾಡಿಗೆ ದನಿ ನೀಡಿದ್ದರು. ಇವರಲ್ಲದೆ ಸುಧೀರ್ ಫಡ್ಕೆ, ಹಂಸರಾಜ್ ಬೆಹ್ಲ್, ಮದನ್ ಮೋಹನ್, ಲಕ್ಷ್ಮೀಕಾಂತ್- ಪ್ಯಾರೇಲಾಲ್, ಎಆರ್ ರಹಮಾನ್ ಸಂಯೋಜನೆಯಲ್ಲೂ ಹಾಡಿದ್ದಾರೆ.