This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

international News

ಶಿಕ್ಷಕಿಗೆ 1 ಲಕ್ಷ ರೂಪಾಯಿ ದಂಡ ದಂಡವನ್ನು ಪಾವತಿಸಲು ವಿಳಂಬ ವಾದರೆ ಜೈಲು ಶಿಕ್ಷೆಯ ಎಚ್ಚರಿಕೆ

WhatsApp Group Join Now
Telegram Group Join Now

ಹಿಮಾಚಲ ಪ್ರದೇಶ –

4ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಥಳಿಸಿದ ಆರೋಪ ಹಾಗೇ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಶಿಕ್ಷಕಿಗೆ ಕೋರ್ಟ್ 1 ಲಕ್ಷ ರೂ ದಂಡ ವಿಧಿಸಿ ಇದನ್ನು ಪಾವತಿಸಲು ತಪ್ಪಿದಲ್ಲಿ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ಹಮೀರ್‌ಪುರ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ಜ್ಯೂನಿಯರ್ ಬೇಸಿಕ್ ಟ್ರೈನಿಂಗ್ ಶಿಕ್ಷಕಿ ಯೊಬ್ಬರಿಗೆ ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿದೆ.

2019ರ ಪ್ರಕರಣ ಇದಾಗಿದ್ದು ಅಮ್ನೆಧ್‌ನ ಪ್ರಾಥಮಿಕ ಶಾಲೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ರಜನಿ ಕುಮಾರಿ ಅವರು 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಥಳಿಸಿದ್ದಲ್ಲೇ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿ ಸಲಾಗಿತ್ತು.ದೂರು ಸ್ವೀಕರಿಸಿದ ರಾಜ್ಯ ಶಿಕ್ಷಣ ಇಲಾಖೆಯು ಆರೋಪಿ ಶಿಕ್ಷಕಿಯನ್ನು ಅಮಾನತುಗೊಳಿಸಿ ಕೆಲ ತಿಂಗಳ ಬಳಿಕ ಬೇರೆ ಶಾಲೆಗೆ ನೇಮಕ ಮಾಡಿತ್ತು.ಘಟನೆ ಸಂಬಂಧ ದೂರಿನ ಆಧಾರದ ಮೇಲೆ ಶಿಕ್ಷಕಿ ವಿರುದ್ಧ ಸೆಕ್ಷನ್ 323, ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಬಾಲಾಪರಾಧಿ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾ ಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರಾದ ಜೆಕೆ ಶರ್ಮಾ ಅವರು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಶಿಕ್ಷಕಿಯನ್ನು ತಪ್ಪಿತಸ್ಥ ರೆಂದು ಪರಿಗಣಿಸಿ,1 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk