ಮುಂಬೈ –
ಕೆಲವೊಂದು ಆರೋಪಗಳಿಂದಾಗಿ ಕಳೆದ 17 ತಿಂಗಳಿನಿಂದ ಸ್ಥಗಿತಗೊಂಡಿದ್ದ ಸುದ್ದಿ ವಾಹಿನಿಗಳ ರೇಟಿಂಗ್ ಡಾಟಾ ಕೊನೆಗೂ ಶೀಘ್ರದಲ್ಲೇ ಹೊರಬೀಳಲಿದೆ ಹೌದು ಟಿವಿ ರೇಟಿಂಗ್ ಗಳ ಮುಖ್ಯ ಸಂಸ್ಥೆ ಬಿಎಆರ್ ಸಿ ಮಾರ್ಚ್ ಮಧ್ಯಭಾಗದಿಂದ ಸುದ್ದಿ ವಾಹಿನಿಗಳ ರೇಟಿಂಗ್ ಡೇಟಾ ವನ್ನು ಪ್ರಕಟಿಸುವುದಾಗಿ ಘೋಷಿಸಿದೆ.17 ತಿಂಗಳಿನಿಂದ ಬಿಎಆರ್ ಸಿ ರೇಟಿಂಗ್ ನ್ನು ಸ್ಥಗಿತಗೊಳಿಸಿತ್ತು.ಈ ಬಗ್ಗೆ ಫೆ.07 ರಂದು ಹೇಳಿಕೆ ಬಿಡುಗಡೆ ಮಾಡಿರುವ ಬಿಎಆರ್ ಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸುದ್ದಿ ವಾಹಿನಿಗಳ ಡೇಟಾವನ್ನು ಬಿಡುಗಡೆ ಮಾಡವುದಕ್ಕೆ ನಿರ್ದೇಶನ ನೀಡಿದ್ದು ಮಾರ್ಚ್ ತಿಂಗಳ ಮಧ್ಯಭಾಗದಿಂದ ರೇಟಿಂಗ್ ಪ್ರಕಟಿಸುವುದಾಗಿ ತಿಳಿಸಿದೆ.

ರಿಪಬ್ಲಿಕ್ ಟಿವಿಯ ಹಿರಿಯ ಅಧಿಕಾರಿಗಳನ್ನೊಳಗೊಂಡ ರೇಟಿಂಗ್ ಗಾಗಿ ನಗದು ಹಗರಣದ ಆರೋಪದ ಹಿನ್ನೆಲೆ ಯಲ್ಲಿ 2020 ರ ಅಕ್ಟೋಬರ್ ನಲ್ಲಿ ಬಿಎಆರ್ ಸಿ ತಾತ್ಕಾಲಿ ಕವಾಗಿ ರೇಟಿಂಗ್ ಗಳನ್ನು ಸ್ಥಗಿತಗೊಳಿಸಿತ್ತು. ವೀಕ್ಷಕರ ಸಂಖ್ಯೆಯ ಅಂದಾಜನ್ನು ನೀಡುವ ಬಿಎಆರ್ ಸಿ ರೇಟಿಂಗ್ ಗಳು ಜಾಹಿರಾತುಗಳಿಗೆ ನಿರ್ಣಾಯಕವಾಗಿರಲಿದೆ.