ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಗಲಿದೆ.ಹೌದು 7ನೇ ವೇತನ ಆಯೋಗ ರಚನೆ ಸಂಬಂಧ ಬಜೆಟ್ ನಲ್ಲಿ ಘೋಷಣೆ ಹೊರಬೀಳಲಿದೆ. ಇದಕ್ಕಾಗಿ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ

ಕೇಂದ್ರ ಸರ್ಕಾರಿ ನೌಕರರ ಮಾದರಿ ವೇತನ ಬೇಡಿಕೆಯನ್ನು ರಾಜ್ಯ ಸರ್ಕಾರಿ ನೌಕರರು ಸಲ್ಲಿಸಿದ್ದು ವೇತನ ತಾರತಮ್ಯ ನಿವಾರಿಸಲು ಸರ್ಕಾರ 7ನೇ ವೇತನ ಆಯೋಗ ರಚಿಸಲು ಸಿದ್ಧತೆ ನಡೆಸಿದೆ.ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತಂತೆ 7ನೇ ವೇತನ ಆಯೋಗವನ್ನು ಸರ್ಕಾರ ರಚನೆ ಮಾಡಲಿದ್ದು ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ವನ್ನು ರಚಿಸಲಾಗುವುದು ಅಥವಾ ಅಧಿಕಾರಿಗಳ ಸಮಿತಿ ರಚಿಸುವ ಸಾಧ್ಯತೆ ಇದೆ

ಕೇಂದ್ರದ ಮಾದರಿ ವೇತನ ಜಾರಿ ಮಾಡಿದ್ರೇ ರಾಜ್ಯ ಸರ್ಕಾರಕ್ಕೆ ವಾರ್ಷಿಕ 7,500 ಕೋಟಿ ಹೆಚ್ಚಿನ ಮೊತ್ತದ ಅಗತ್ಯವಿದೆ.ಗ್ರೇಡ್ ಪೇ,ಇತರೆ ಭತ್ಯೆ ಸೇರಿ ಈ ಮೊತ್ತ 15 ಸಾವಿರ ಕೋಟಿ ಮೀರಲಿದೆ.ಆದ್ರೇ ಬಹುದೊಡ್ಡ ಹಣಕಾಸಿ ನ ಹೊರೆ ತಡೆದುಕೊಳ್ಳುವ ಸ್ಥಿತಿಯಲ್ಲಿ ರಾಜ್ಯವಿಲ್ಲ ಸದ್ಯಕ್ಕೆ ಮಧ್ಯಂತರ ವರದಿ ಪಡೆದು ಜುಲೈ ನಲ್ಲಿ 7ನೇ ವೇತನ ಆಯೋಗ ಜಾರಿ ಮಾಡುವುದು ಆ ನಂತ್ರ ಅಂತಿಮ ವರದಿ ಪಡೆದು ಜಾರಿಗೆ ತರಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ ಹೀಗಾಗಿ ರಾಜ್ಯ ಸರ್ಕಾರದ ಸ್ಪಷ್ಟ ಚಿತ್ರಣ ಫೆಬ್ರುವರಿ 14 ರಿಂದ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ಕಂಡು ಬರಲಿದ್ದು ಈಗಾಗಲೇ ಈ ಕುರಿತು ಸರ್ಕಾರಿ ನೌಕರರ ಪರವಾಗಿ ಬೇಡಿಕೆಗಳ ಪತ್ರವನ್ನು ನೀಡಲಾಗಿದೆ