ಬೆಂಗಳೂರು –
ಪದವಿ ಹೊಂದಿ ಸಧ್ಯ ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರ ಸಂಕಷ್ಟಕ್ಕೆ ಕೊನೆಗೂ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಆತಂಕವನ್ನು ದೂರ ಮಾಡಿದ್ದಾರೆ.ಹೌದು ಪದವಿ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಿರಿಯ ಪ್ರಾಥಮಿಕ ತರಗತಿಗೆ ಬೋಧಿಸಲು ಅರ್ಹತೆ ಹೊಂದಿದ್ದರೂ ಕಿರಿಯ ಪ್ರಾಥಮಿಕ ತರಗತಿಗಳಿಗೆ ಬೋಧಿ ಸುತ್ತಿರುವುದು ಗಮನಕ್ಕೆ ಬಂದಿದ್ದು ಇವರನ್ನು ಕಡೆಗಣಿ ಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ಶಿಕ್ಷಕರ ಕ್ಷೇತ್ರದಿಂದ ಚುನಾಯಿತಗೊಂಡ ಸದಸ್ಯ ಡಾ ತಳವಾರ ಸಾಬಣ್ಣ ಇವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ದರು.ಈಗಾಗಲೇ ಇವರಿಗೆ ನೇಮಕಾತಿಗಾಗಿ ಪರೀಕ್ಷೆಯ ಮೂಲಕ ಅವಕಾಶವನ್ನು ಕಲ್ಸಿಸಲಾಗಿದೆ ಎಂದು ಉತ್ತರಿಸಿ ದರು. ಹಾಗೇ ಪದವಿ ಹೊಂದಿದ ಪ್ರಾಥಮಿಕ ಶಿಕ್ಷಕರಿಗೆ ಸಿ ಆಂಡ್ ಆರ್ ನಲ್ಲಿ ಸೂಕ್ತ ತಿದ್ದುಪಡಿ ತಂದು ನ್ಯಾಯ ಒದಗಿ ಸಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.