ಹೆಬ್ಬಳ್ಳಿ –
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಖಾಸಗಿ ಶಾಲೆಗಳ ಹೈ ಪೈ ಅಬ್ಬರದ ನಡುವೆ ಅದೆಷ್ಟೋ ನಮ್ಮ ಸರ್ಕಾರಿ ಶಾಲೆಗಳು ಇನ್ನೂ ಜೀವಂತವಾಗಿದ್ದು ಶಾಲೆಯಲ್ಲಿನ ಶಿಕ್ಷಕರ ಪರಿಶ್ರಮ ಕಲಿಕಾ ಗುಣಮಟ್ಟ ಇವೆಲ್ಲದರ ಪರಿಣಾಮವಾಗಿ ಇನ್ನೂ ಕೂಡಾ ನಮ್ಮ ಸರ್ಕಾರಿ ಶಾಲೆಗಳು ತಮ್ಮದೇ ಯಾದ ಅಸ್ಥಿತ್ವವನ್ನು ಉಳಿಸಿಕೊಂಡಿದ್ದು ಹೆಮ್ಮೆಯ ವಿಚಾರವಾಗಿದ್ದು ಇನ್ನೂ ಇತ್ತೀಚಿನ ದಿನಗಳಲ್ಲಿ ಈ ಸರ್ಕಾರಿ ಶಾಲೆಗಳು ಕೂಡಾ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ ಎಂಬಂತೆ ಇಂದು ನಮ್ಮ ಮುಂದೆ ನಿಂತುಕೊಂಡಿದ್ದು ಇದಕ್ಕೆ ತಾಜಾ ಉದಾಹರಣೆ ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿನ ಸರ್ಕಾರಿ ಶಾಲೆ
ಇದು ಯಾವುದೋ ಖಾಸಗಿ ಶಾಲೆ ಅಂದುಕೊಡಿದ್ದರೆ ಖಂಡಿತವಾಗಿ ನಿಮ್ಮ ಕಲ್ಪನೆ ತಪ್ಪು ಇದನ್ನು ಒಮ್ಮೆ ನೋಡಿದರೆ ಇದು ಯಾವುದೇ ರೀತಿಯ ಖಾಸಗಿ ಶಾಲೆಗೆ ಕಡಿಮೆ ಇಲ್ಲ ಎಂಬಂತೆ ಇಂದು ನಮ್ಮ ಮುಂದೆ ಪ್ರತಿಬಿಂಬ ವಾಗಿ ಬೆಳೆದು ನಿಂತುಕೊಂಡಿದೆ
ಖಂಡಿತವಾಗಿಯೂ ಇದು ಖಾಸಗಿ ಶಾಲೆಯಲ್ಲ ಇದು ಸರ್ಕಾರಿ ಶಾಲೆ ಧಾರವಾಡ ಜಿಲ್ಲೆಯ ಧಾರವಾಡ ತಾಲೂ ಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ,ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಮತ್ತು ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಅವರ ನಿರಂತರ ಶ್ರಮದಿಂದ ಶಾಲೆ ತುಂಬಾ ತುಂಬಾ ಆಕರ್ಷಕವಾಗಿದೆ
ಗ್ರಾಮದ ಚುನಾಯಿತ ಪ್ರತಿನಿಧಿಗಳು ಅದರಲ್ಲೂ ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾದ್ಯಕ್ಷರು ಸರ್ವ ಸದಸ್ಯರ ಸಹಕಾರ ಹಾಗೂ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಒಗ್ಗಟ್ಟಿನಿಂದ ಈ ಶಾಲೆ ಪ್ರಗತಿಪಥದತ್ತ ಸಾಗುತ್ತಿದೆ.ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ,ಸಿ ಆರ್ ಪಿ ಮುಲ್ಲಾನವರ ಇವರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿಯ ಸಹಕಾರದೊಂದಿಗೆ ಶಾಲೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೊಂಡೊಯ್ಯುವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ರಮೇಶ ಕಾಂಬಳೆ