ಗೋಕಾಕ –
ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ನೂತನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳ ತಂಡ ಆಗಮಿಸಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ಕೌನ್ಸಲಿಂಗ್ ಪ್ರಕ್ರಿಯೆ ಯಲ್ಲಿ ಪಾಲ್ಗೊಂಡು ಹೊಸ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.ಹೌದು ಇದೊಂದು ತುಂಬಾ ಸಂತಸದ ವಿಷಯವಾಗಿದ್ದು ವಲಯ ವ್ಯಾಪ್ತಿ ಯಲ್ಲಿ ಕಾರ್ಯ ನಿರ್ವಹಿಸುವ ಹೊಸ ಕನಸು ಹೊತ್ತ ತಂಡ ಬಳಗಕ್ಕೆ ಸೇರಿದೆ.ಈಗಾಗಲೇ ಹಳೆ ಸ್ನೇಹಿತರು ತಮ್ಮ ಸೃಜನ ಶೀಲತೆ ಯಿಂದ ಕಟ್ಟಿದ ಸಮೃದ್ಧ ಶೈಕ್ಷಣಿಕ ವಲಯ.ಇನ್ನೂ ಹೆಚ್ಚು ಹೆಚ್ಚು ಸಮೃದ್ಧಿ ಆಗಲಿ.ಮಕ್ಕಳ ಹಾಗೂ ಪಾಲಕರ ಕನಸುಗಳು ನನಸಾಗಲಿ.ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಆಗಲಿ.ಆ ನಿಟ್ಟಿನಲ್ಲಿ ಮತ್ತೆ.ಮತ್ತೆ ಶೈಕ್ಷಣಿಕ ಕ್ರಾಂತಿಗೆ ನಾಂದಿ ಆಗುವಂತಹ ನಾವೀನ್ಯಯುತ ಚಟುವಟಿಕೆಗಳನ್ನು ಮೈ ಗೂಡಿಸಿಕೊಂಡು ಸೃಜನಶೀಲ ಮತ್ತು ಕ್ರೀಯಾ ಶೀಲತೆ ಯನ್ನು ಮೈಗೂಡಿಸಿಕೊಂಡು ಕಾರ್ಯ ನಿರ್ವಹಿಸುವ ಮನೋಭಾವ ಹೊಂದಿ ಗೋಕಾಕ ಶೈಕ್ಷಣಿಕ ವಲಯದ ಬಳಗಕ್ಕೆ ಸೇರಿದ್ದಾರೆ

ಹಲವು ಶಿಕ್ಷಕ ಬಂಧುಗಳು. ಇನ್ನೂ ಬಳಗಕ್ಕೆ ಆಗಮಿಸಿದ ಸರ್ವರಿಗೂ ಪ್ರೀತಿಯಿಂದ ಸ್ವಾಗತ ಸುಸ್ವಾಗತವನ್ನು ವಲಯದ ಸರ್ವ ಶಿಕ್ಷಕರ ಮತ್ತು ಇಲಾಖೆಯ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಟೀಮ್ ನವರು ಕೋರಿ ದ್ದಾರೆ.ಎಲ್ಲರಿಗೂ ಶುಭವಾಗಲಿ ಭಗವಂತನ ಕೃಪೆ ತಮಗೆ ಸದಾ ಇರಲಿ ಎಂದು ಆಶಿಸುತ್ತಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೋಕಾಕ ಜಿ ಬಿ ಬಳಿಗಾರ ಮತ್ತು ಸರ್ವ ಸದಸ್ಯರು ಶಿಕ್ಷಕ ಬಂಧುಗಳು ಕೋರಿದ್ದಾರೆ.