ಕೋಲ್ಕತ್ತಾ(ಪಶ್ಚಿಮ ಬಂಗಾಳ) –
ಕೆಲವೊಮ್ಮೆ ಕಾನೂನು ಹೋರಾಟದಲ್ಲಿ ನ್ಯಾಯ ಸಿಗು ವುದೇ ಡೌಟ್ ಎನ್ನುತ್ತಾರೆ ಅನೇಕರು.ಆದರೆ ಇಲ್ಲೋರ್ವ ವೃದ್ಧೆಗೆ ಬರೋಬ್ಬರಿ 46 ವರ್ಷಗಳ ಬಳಿಕ ಕಾನೂನು ಹೋರಾಟದಲ್ಲಿ ನ್ಯಾಯ ಸಿಕ್ಕಿದೆ.ಕಲ್ಕತ್ತಾ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಅಭಿಜಿತ್ ಗಂಗೂಲಿ ಈ ಮಹತ್ವದ ತೀರ್ಪು ನೀಡಿದ್ದಾರೆ.1976ರಲ್ಲಿ ಬಂಗಾಳಿ ಶಿಕ್ಷಕಿಯಾಗಿ ಶಾಲೆಗೆ ಸೇರಿಕೊಂಡಿದ್ದ ಶಿಕ್ಷಕಿಯೊಬ್ಬರನ್ನು ನಾಲ್ಕು ವರ್ಷ ಗಳ ನಂತರ ಹೊರಹಾಕಲಾಗಿತ್ತು.ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ದಾವೆ ಹೂಡಿಕೆ ಮಾಡಿದ್ದ ಅವರು, ಬರೋ ಬ್ಬರಿ 42 ವರ್ಷಗಳ ನಂತರ ಜಯ ಸಾಧಿಸಿದ್ದಾರೆ.
ಶಾಮಿಲಿ ಘೋಷ್ ಯುವತಿ 1976ರಲ್ಲಿ ಶಾಂಪುರ್ ಹೈಸ್ಕೂಲ್ ನಲ್ಲಿ ಬಂಗಾಳಿ ಶಿಕ್ಷಕಿಯಾಗಿ ಸೇರಿಕೊಂಡಿದ್ದರು. ಆದರೆ ನಾಲ್ಕು ವರ್ಷಗಳ ನಂತರ ಅಂದರೆ 1980ರಲ್ಲಿ ಅಂದಿನ ಮುಖ್ಯೋಪಾಧ್ಯಾಯರು ಅವರನ್ನು ಶಾಲೆಯಿಂದ ಹೊರ ಹಾಕುತ್ತಾರೆ.ಯಾವುದೇ ಕಾರಣವಿಲ್ಲದೇ ಅವರನ್ನ ಹೊರಹಾಕಿದ್ದರಿಂದ ಆರು ವರ್ಷಗಳ ಕಾಲ ಮನೆಯಲ್ಲೇ ಕಾಲ ಕಳೆಯಬೇಕಾಯಿತು.ಘಟನೆಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ನಲ್ಲಿ 1986ರಲ್ಲಿ ಮೊಕದ್ದಮೆ ದಾಖಲು ಮಾಡಿ,ತಮಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದರು.ಇದರ ಮಧ್ಯೆ ನವೆಂಬರ್ 30 2005 ರಂದು ಶಾಲೆಗೆ ಹಾಜರಾಗದೇ ಸೇವೆಯಿಂದ ನಿವೃತ್ತರಾಗಿ ಇದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಕಲ್ಕತ್ತಾ ಹೈಕೋರ್ಟ್ ಉಳಿದ ಬಾಕಿ ಸ್ಯಾಲರಿ ಹಾಗೂ ಪಿಂಚಣಿ ನೀಡುವಂತೆ ಆದೇಶ ನೀಡಿತು.ಆದರೆ 25 ವರ್ಷಗಳಾದರೂ ಶಿಕ್ಷಕಿಯ ವೇತನ ತೆರವುಗೊಂಡಿರಲಿಲ್ಲ.ಆದರೆ ನ್ಯಾಯಮೂರ್ತಿ ಅಭಿಜಿತ್ ಗಂಗೂಲಿ ಎಂಟು ವಾರಗಳಲ್ಲಿ ಬಾಕಿ ಮೊತ್ತ ಪಾವತಿ ಮಾಡುವುದರ ಜೊತೆಗೆ ಪಿಂಚಣಿ ನೀಡುವಂತೆ ಸೂಚನೆ ನೀಡಿದೆ.ಇದರ ಜೊತೆಗೆ ಎಲ್ಲ ಮಾಹಿತಿಯನ್ನ ನಾಲ್ಕು ವಾರಗಳಲ್ಲಿ ಶಾಲಾ ಶಿಕ್ಷಣ ಉಪ ನಿರ್ದೇಶನಾಲ ಯಕ್ಕೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.