ಹುಬ್ಬಳ್ಳಿ –
ಟಿಪ್ಪರ್ ವೊಂದು ಬೈಕ್ ಗೆ ಗುದ್ದಿಕೊಂಡು ಹೋಗಿ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿರುವ ಘಟನೆ ಧಾರವಾಡದ ಹೆಬಸೂರು ಗ್ರಾಮದಲ್ಲಿ ನಡೆದಿದೆ. ಹೆಬಸೂರು ಗ್ರಾಮದ ನವಲಗುಂದ ರಸ್ತೆಯ ಟೋಲ್ ಗೇಟ್ ಬಳಿಯಿರುವ ಕೆನಾಲ್ ಬಳಿ ಈ ಒಂದು ಅಪಘಾತವಾಗಿದೆ. ಬೈಕ್ ನಲ್ಲಿ ಇಬ್ಬರು ಸವಾರರು ಹೋಗುತ್ತಿದ್ದರು. ಮುಂದೆ ಹೋಗುತ್ತಿದ್ದ ಬೈಕ್ ಗೆ ಹಿಂದಿನಿಂದ ಬಂದ ಟಿಪ್ಪರ್ ವೊಂದು ಗುದ್ದಿದೆ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರಿಬ್ಬರು ಸಾವಿಗೀಡಾಗಿದ್ದಾರೆ.
ಟಿಪ್ಪರ್ ಗುದ್ದಿದ ರಭಸಕ್ಕೇ ಬೈಕ್ ಸವಾರಿಬ್ಬರು ಇಪ್ಪತ್ತು ಅಡಿಗಿಂತಲೂ ಹೆಚ್ಚು ದೂರ ಹೋಗಿ ಬಿದ್ದಿದ್ದು ಅಷ್ಟೋಂದು ವೇಗದಲ್ಲಿ ಟಿಪ್ಪರ್ ಇತ್ತು. ಸ್ಥಳದಲ್ಲಿಯೇ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ್ದು ಹನಮಂತ ಚಿಕ್ಕನರ್ತಿ , ಹನುಮಂತ ತಳವಾರ ಸಾವಿಗೀಡಾದ ಮೃತರು ಬೈಕ್ ಸವಾರರಾಗಿದ್ದಾರೆ.
ಇವರಿಬ್ಬರು ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮದವರಾಗಿದ್ದಾರೆ. ಬೈಕ್ ಗೆ ಗುದ್ದಿಕೊಂಡು ಟಿಪ್ಪರ್ ನೊದಿಗೆ ಚಾಲಕ ಪರಾರಿಯಾಗಿದ್ದಾರೆ. ಇನ್ನೂ ವಿಷಯ ತಿಳಿದ ನವಲಗುಂದ ಮತ್ತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಬಸೂರಿನಿಂದ ಕಾಲವಾಡಗೆ ಬೈಕ್ ನಲ್ಲಿ ಇಬ್ಬರು ಬೈಕ್ ಸವಾರರು ಹೊರಟಿದ್ದರು.
ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಟಿಪ್ಪರ್ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.ಇನ್ನೂ ಇನ್ನೊಂದೆಡೆ ಕೊಟಗುಣಸಿ ಬಳಿ ಬೈಕ್ ಸವಾರೊಬ್ಬ ಸ್ಕೀಡ್ ಆಗಿ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.