ಇಲಾಖೆಯ ಕಂಟ್ರೋಲ್ ತಪ್ಪಿದ BRTS ರಸ್ತೆ – ಹೇಳೊರಿಲ್ಲ ಕೇಳೊರಿಲ್ಲ ಯಾರು ಬೇಕಾದ್ರು ಹೇಗೆ ಬೇಕಾದ್ರೂ ಹೋಗಬಹುದು…..ಇದು BRTS ರಸ್ತೆಯ ಕಥೆಯ ವ್ಯಥೆ ಒಮ್ಮೆ ನೋಡಿ DC ಅವರೇ…..

Suddi Sante Desk
ಇಲಾಖೆಯ ಕಂಟ್ರೋಲ್ ತಪ್ಪಿದ BRTS ರಸ್ತೆ – ಹೇಳೊರಿಲ್ಲ ಕೇಳೊರಿಲ್ಲ ಯಾರು ಬೇಕಾದ್ರು ಹೇಗೆ ಬೇಕಾದ್ರೂ ಹೋಗಬಹುದು…..ಇದು BRTS ರಸ್ತೆಯ ಕಥೆಯ ವ್ಯಥೆ ಒಮ್ಮೆ ನೋಡಿ DC ಅವರೇ…..

ಹುಬ್ಬಳ್ಳಿ ಧಾರವಾಡ

ಇಲಾಖೆಯ ಕಂಟ್ರೋಲ್ ತಪ್ಪಿದ BRTS ರಸ್ತೆ – ಹೇಳೊರಿಲ್ಲ ಕೇಳೊರಿಲ್ಲ ಯಾರು ಬೇಕಾದ್ರು ಹೇಗೆ ಬೇಕಾದ್ರೂ ಹೋಗಬಹುದು ಇದು BRTS ರಸ್ತೆಯ ಕಥೆಯ ವ್ಯಥೆ ಒಮ್ಮೆ ನೋಡಿ DC ಅವರೇ…..

ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿರುವ ಚಿಗರಿ ಬಸ್ ಗಳು ಸಾರ್ವಜನಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ಉಪಯೋಗವಾಗಿದ್ದು ಒಂದೆಡೆಯಾದರೆ ಇನ್ನೂ ಇತ್ತ ಈ ಒಂದು BRTS ರಸ್ತೆ ಕೂಡಾ ಅಷ್ಟೇ ಸಾರ್ವಜನಿಕರಿಗೆ ಅನುಕೂಲವಾಗಿದೆ ಆರಂಭದಲ್ಲಿ ಈ ಹಿಂದೆ ರಾಜೇಂದ್ರ ಚೋಳನ್ ಅವರು ಈ ಒಂದು BRTS ರಸ್ತೆಯಲ್ಲಿ ಚಿಗರಿ ಬಸ್ ತುರ್ತು ವಾಹನ ಮಾತ್ರ ಸಂಚಾರಕ್ಕೆ ಅವಕಾಶವನ್ನು ನೀಡಿ ಅಂದಿನ ಡಿಸಿ ಯಾಗಿದ್ದ ದೀಪಾ ಚೋಳನ್ ಅವರಿಂದ ಆದೇಶವನ್ನು ಕೂಡಾ ಮಾಡಿಸಿದ್ದರು

ಇದು ಆರಂಭದಲ್ಲಿ ಯಶಸ್ವಿಯಾಗಿ ನಡೆಯಿತು ನಂತರ ಈ ಒಂದು ಪಥದಲ್ಲಿ ಸಾಕಷ್ಟ ಪ್ರಮಾಣಧಲ್ಲಿ ಖಾಸಗಿ ವಾಹನಗಳು ಸಂಚಾರವನ್ನು ಮಾಡುತ್ತಿದ್ದು ಇದಕ್ಕೆ ತಾಜಾ ಉದಾಹರಣೆ ಸಧ್ಯದ ಚಿತ್ರಣ ಚಿಗರಿ ಬಸ್ ಗಳು ತುರ್ತು ವಾಹನಗಳ ಗಳ ಮಧ್ಯೆ ಬೈಕ್ ಕಾರ್ ಗಳು ಟ್ಯಾಕ್ಸಿ ಗೂಡ್ಸ್ ವಾಹನಗಳ ಸಂಚಾರ ಹೆಚ್ಚಾಗಿದ್ದು ಹೀಗಾಗಿ ಈ ಒಂದು ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ಈ ಒಂದು ವಿಚಾರ ಕುರಿತಂತೆ ಚಿಗರಿ ಬಸ್ ಚಾಲಕರು ಹೇಳಿದ್ರು ಯಾರು ನೋಡುತ್ತಿಲ್ಲ ಕೇಳುತ್ತಿಲ್ಲ ಆತಂಕದಲ್ಲಿ ಚಾಲಕರು ಕರ್ತವ್ಯವನ್ನು ಮಾಡುತ್ತಿದ್ದರೆ ಇತ್ತ ಇದ್ಯಾವುದು ಗಮನಕ್ಕೆ ಇಲ್ಲದಂತೆ ಇಲಾಖೆಯ ಅಧಿಕಾರಿಗಳು ಇದ್ದಾರೆ

BRTS ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಕೂಡಾ ಯಾರ ಭಯವಿಲ್ಲದೇ ಯಾವುದೇ ಚಿಂತೆ ಇಲ್ಲದೇ ಬಂದಾಸ್ ಆಗಿ ವಾಹನಗಳು ಸಂಚಾರವನ್ನು ಮಾಡುತ್ತಿದ್ದು ಸಧ್ಯ ಈ ಒಂದು ರಸ್ತೆ ಇಲಾಖೆಯ ಕಂಟ್ರೋಲ್ ತಪ್ಪಿದ್ದು ಡಿಸಿಯವರೇ ಇಲ್ಲಿ ಎಷ್ಟೊಂದು ಖಾಸಗಿ ವಾಹನಗಳು ಸಂಚಾರವನ್ನು ಮಾಡುತ್ತಿದ್ದು ಚಾಲಕರು ಯಾರು ಪರಸ್ಥಿತಿಯಲ್ಲಿ ಡೂಟಿ ಮಾಡ್ತಾ ಇದ್ದಾರೆ ಒಮ್ಮೆ ನೋಡಿ ಗಮನಹರಸಿ ಇಲಾಖೆ ಯಲ್ಲಿದ್ದುಕೊಂಡು ಕಂಡು ಕಾಣದಂತೆ ಹೇಗೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಇನ್ನಾದರು ಡಿಸಿಯವರು ಇತ್ತ ಗಮನ ಹರಿಸುತ್ತಾರಾ ಎಂಬೊದನ್ನು ಕಾದು ನೋಡಬೇಕಿದೆ ಇಲ್ಲವಾದರೆ ಸುದ್ದಿ ಸಂತೆ ಟೀಮ್ ತಮ್ಮ ಅಭಿಯಾನವನ್ನು ಮುಂದುವರೆಸಲಿದೆ.

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.