ಧಾರವಾಡ –
ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಮತ್ತೆ ಎರಡು ದಿನಗಳಿಂದ ಸಿಬಿಐ ಅಧಿಕಾರಿಗಳು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಿನ್ನೇಯಷ್ಟೇ ಈ ಒಂದು ಪ್ರಕರಣದಲ್ಲಿ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ನಿನ್ನೇ ತಡರಾತ್ರಿ ವಶಕ್ಕೇ ತಗೆದುಕೊಂಡಿರುವ ಸಿಬಿಐ ಅಧಿಕಾರಿಗಳು ಅವರಿಗೆ ಕೊವಿಡ್ ಪರೀಕ್ಷೆ ಮಾಡಿಸಿದ ನಂತರ ನ್ಯಾಯಾಧೀಶರ ಎದುರಿಗೆ ಹಾಜರು ಮಾಡಲಿದ್ದು ವಿಚಾರಣೆಯನ್ನು ಸಿಬಿಐ ಅಧಿಕಾರಿಗಳು ಮುಂದುವರೆಸಿದ್ದಾರೆ.
ಇನ್ನೂ ಇವೆಲ್ಲದರ ನಡುವೆ ಇತ್ತ ಮತ್ತೆ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಸವರಾಜ ಮುತ್ತಗಿಗೆ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಸಿಬಿಐ ಅಧಿಕಾರಿಗಳು ಹೇಳುತ್ತಿದ್ದಂತೆ ಮತ್ತೆ ಬಸವರಾಜ ಮುತ್ತಿಗೆ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಸಿದರು.
ಸಿಬಿಐ ಅಧಿಕಾರಿಗಳ ಮುಂದೆ ಮತ್ತೆ ವಿಚಾರಣೆಗೆ ಬಸವರಾಜ ಮುತ್ತಗಿ ಆಗಮಸಿದ್ದಾರೆ. ಬಸವರಾಜ ಮುತ್ತಗಿ, ಪೊಲೀಸ್ ತನಿಖೆ ಪ್ರಮುಖ ಆರೋಪಿಯಾಗಿದ್ದು ಈಗಾಗಲೇ ಚಂದ್ರಶೇಖರ ಇಂಡಿ ವಶಕ್ಕೆ ಪಡೆದಿರುವ ಸಿಬಿಐ ಇಂಡಿ ಮತ್ತು ಮುತ್ತಗಿಗೆ ಸಿಬಿಐ ನಿಂದ ವಿಚಾರಣೆ ಆರಂಭ ಮಾಡಲಿದ್ದಾರೆ.ಇನ್ನೂ ಹತ್ಯೆಗೆ ಭೀಮಾ ತೀರದಿಂದ ಪಿಸ್ತೂಲ್ ಪೂರೈಕೆ ವಿಚಾರವೂ ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದ್ದು ಈ ಒಂದು ವಿಚಾರವಾಗಿ ಒರ್ವ ಆರೋಪಿಯನ್ನು ನಿನ್ನೇ ಸಿಬಿಐ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ವಶಕ್ಕೆ ತಗೆದುಕೊಂಡಿದ್ದು ಅವನನ್ನು ಕೂಡಾ ವಿಚಾರಣೆ ಮಾಡುತ್ತಿದ್ದಾರೆ. ಒಟ್ಟಾರೆ ಸಿಬಿಐ ಅಧಿಕಾರಿಗಳ ತನಿಖೆ ಚುರುಕೊಂಡಿದೆ.