ಬೆಂಗಳೂರು –
ಸಧ್ಯ ಈಗಾಗಲೇ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಇನ್ನೂ ಮತ್ತೆ ಹೊಸದಾಗಿ ಮತ್ತೆ 15 ಸಾವಿರ ಶಿಕ್ಷಕ ರನ್ನು ನೇಮಕಾತಿ ಮಾಡಿಕೊಳ್ಳೊದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.ಸಿಂಧನೂರಿನಲ್ಲಿ ಈ ಒಂದು ವಿಚಾರ ಪ್ರಸ್ತಾಪ ವನ್ನು ಮಾಡಿದ್ದು ಇದರ ಬೆನ್ನಲ್ಲೇ ನಾಡಿನ ಪದವಿ ಶಿಕ್ಷಕರು ಅಸಮಾಧಾನ ಗೊಂಡಿದ್ದಾರೆ.ಹೌದು ಈಗಾಗಲೇ ಪದವಿ ಹೊಂದಿದ ಸೇವಾನಿರತ ಪದವಿಧರ ಶಿಕ್ಷಕರನ್ನು 40% ಸೇವಾ ಜೇಷ್ಠತೆಯೊಂದಿಗೆ ಮುಂಬಡ್ತಿ ಮಾಡ್ತೀವಿ ಅಂತ ಹೇಳಿ ಇವಾಗ ಮತ್ತೆ 15000 ಹೊಸ ಶಿಕ್ಷಕರನ್ನು ಮಾಡುವದಾಗಿ ಹೇಳ್ತಿದ್ದಾರೆ.
ಹಾಗಾದರೆ ಇಷ್ಟು ದಿನ ನೀವೆಲ್ಲ ಮಾಡಿದ್ದು ಪ್ರಯತ್ನ ಏನಾಯಿತು?.ನಮ್ಮ ಸೇವಾ ನಿರತ ಪದವಿಧರ ಶಿಕ್ಷಕರಿಗೆ ನ್ಯಾಯ ಕೊಡಿಸೋಕೆ ನಿಮ್ಮಿಂದ ಸಾಧ್ಯ ಆಗುತ್ತಾ ಇಲ್ವಾ?. ಆಗಲ್ಲ ಅಂದ್ರೆ ಅವರ ಸಮಸ್ಯೆ ಅವರೇ ಬಗೆಹರಿಸಿಕೊ ಳ್ಳಲು ಪ್ರಯತ್ನ ಆದರೂ ಮಾಡುತ್ತಾರೆ ಸುಮ್ಮನೆ ಶಿಕ್ಷಕರಿಗೆ ನಂಬಿಸಿ ಮೋಸ ಮಾಡಬೇಡಿ ಅಂತಾ ರಾಜ್ಯದ ಶಿಕ್ಷಕ ಬಂಧುಗಳು ಸಂಘಟನೆ ಯ ನಾಯಕರಿಗೆ ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರಿಸೊದು ಅವಶ್ಯಕತೆ ಇದೆ ಜೊತೆಗೆ ನ್ಯಾಯ ದೊರಕಿಸಿಕೊಡುವುದು ತುಂಬಾ ಅವಶ್ಯಕತೆ ಇದೆ