ಧಾರವಾಡ –
ಪಶ್ಚಿಮ ಶಿಕ್ಷಕರ ಚುನಾವಣೆ ನಿಮಿತ್ಯ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾದ ಬಸವರಾಜ ಹೊರಟ್ಟಿ ಯವರ ಪರವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರಚಾರ ಮಾಡಿದರು ತಾಲ್ಲೂಕಿನ ಮತ ಕ್ಷೇತ್ರದ ಗರಗ ಗ್ರಾಮದ ಜಯಕೀರ್ತಿ ಮಹಾವಿದ್ಯಾಲಯ, ಎಸ್ ಜಿ ಎಂ ಪದವಿಪೂರ್ವ ಕಾಲೇಜು,ಎಸ್ ಜಿ ಎಂ ಪ್ರೌಢ ಶಾಲೆ ಹಾಗೂ ಶ್ರೀ ಮಡಿವಾಳೇಶ್ವರ ಪದವಿ ಕಾಲೇಜಿಗೆ ಭೇಟಿ ನೀಡಿ ಕೇಂದ್ರ ಹಾಗು ರಾಜ್ಯ ಬಿಜೆಪಿ ಆಡಳಿತದ ಸಾಧನೆಗಳನ್ನು ಶಿಕ್ಷಕರಿಗೆ ತಿಳಿಸಿ ಪಕ್ಷದ ಅಭ್ಯರ್ಥಿಯಾದ ಬಸವರಾಜ ಹೊರಟ್ಟಿಯವರ ಪರವಾಗಿ ಮತಯಾಚನೆ ಮಾಡಲಾಯಿತು.
ಈ ಒಂದು ಸಂದರ್ಭದಲ್ಲಿ ಬಸವರಾಜ ಕುಂದಗೋಳಮಠ ಜಿಲ್ಲಾ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ,ಮಾಜಿ ಶಾಸಕಿ ಶ್ರೀಮತಿ ಸೀಮಾ ಅಶೋಕ್ ಮಸೂತಿ,ರುದ್ರಪ್ಪ ಅರಿವಾಳ,ಅಧ್ಯಕ್ಷರು,ಧಾರವಾಡ ಮಂಡಲ ಸಂಗನಗೌಡ ರಾಮನಗೌಡ್ರ ಪಕ್ಷ ಪ್ರಮುಖರು.ತವನಪ್ಪ ಅಷ್ಟಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ಶಂಕರ ಮುಗದ,ಕೆ ಎಂ ಎಫ್ ಅದ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು