ಶಾಲಾ ಸಮಯದಲ್ಲಿ ಶಿಕ್ಷಕರು ಹೊರಗಡೆ ಹೋಗುವಂತಿಲ್ಲ ಇಲಾಖೆ ಆದೇಶ – ಸರ್ಕಾರಿ ಶಾಲೆಗಳಲ್ಲಿ ಆ ಕೆಲಸ ಈ ಕೆಲಸ ಮಾಡೊರು ಯಾರು…..ಎಲ್ಲವೂ ಶಿಕ್ಷಕರ ಹೆಗಲಿಗೆ ಮೊದಲು ಈ ಬಾರ ಕಡಿಮೆ ಮಾಡಿ…..

Suddi Sante Desk
ಶಾಲಾ ಸಮಯದಲ್ಲಿ ಶಿಕ್ಷಕರು ಹೊರಗಡೆ ಹೋಗುವಂತಿಲ್ಲ ಇಲಾಖೆ ಆದೇಶ – ಸರ್ಕಾರಿ ಶಾಲೆಗಳಲ್ಲಿ ಆ ಕೆಲಸ ಈ ಕೆಲಸ ಮಾಡೊರು ಯಾರು…..ಎಲ್ಲವೂ ಶಿಕ್ಷಕರ ಹೆಗಲಿಗೆ ಮೊದಲು ಈ ಬಾರ ಕಡಿಮೆ ಮಾಡಿ…..

ಬೆಂಗಳೂರು

ರಾಜ್ಯದ ಸರ್ಕಾರಿ ಶಿಕ್ಷಕರು ಶಾಲಾ ವೇಳೆಯಲ್ಲಿ ಹೊರಗಡೆ ಹೋಗುವಂತಿಲ್ಲ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ವನ್ನು ಮಾಡಿದೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಹಾಗೂ ವಿದ್ಯಾರ್ಥಿಗಳ ಕಲಿಕಾ ಫಲಿತಾಂಶ ಸುಧಾರಿ ಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ಹೊರಡಿ ಸಿರುವ ಆದೇಶದಲ್ಲಿ, ಶಾಲಾ ಸಮಯದಲ್ಲಿ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಶಾಲೆಯಲ್ಲೇ ಹಾಜರಿದ್ದು ಬೋಧನೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಡಯಟ್ ಪ್ರಾಂಶುಪಾಲರು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಈ ಹೊಸ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸ್ಪಷ್ಟಪಡಿಸಿದೆ.

ಶಾಲಾ ಸಮಯದಲ್ಲಿ ಯಾವುದೇ ಶಿಕ್ಷಕರು ಅಥವಾ ಮುಖ್ಯೋ ಪಾಧ್ಯಾಯರನ್ನು ತರಬೇತಿ, ಕಾರ್ಯಾಗಾರ, ಸಭೆ ಅಥವಾ ಇತರೆ ಕಾರ್ಯಕ್ರಮಗಳಿಗೆ ನಿಯೋಜಿಸಬಾರದು. OOD ನೀಡು ವುದಕ್ಕೂ ಅವಕಾಶ ಇರುವುದಿಲ್ಲ.ಶಾಲಾ ವೇಳೆಯಲ್ಲಿ ಸಭೆಗಳು ಅಥವಾ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಬಾರದು. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳು ತರಗತಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ನಡೆದುಕೊಳ್ಳಬೇಕುಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಕರೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ.

ಶಾಲಾ ದಿನಗಳಲ್ಲಿ KPSC ಸೇರಿದಂತೆ ಯಾವುದೇ ಬಾಹ್ಯ ಪರೀಕ್ಷೆಗಳನ್ನು ಸರ್ಕಾರಿ ಶಾಲಾ ಆವರಣದಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ. ಅಗತ್ಯವಿದ್ದರೆ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಅವಧಿಯಲ್ಲಿ ಮಾತ್ರ ಅನುಮತಿ ನೀಡಬಹುದು ಖಾಸಗಿ ಸಂಸ್ಥೆಗಳು ಅಥವಾ ಜ್ಞಾನ ಪಾಲುದಾರರ ಸಾಫ್ಟ್‌ವೇರ್‌ ಗಳಲ್ಲಿ ಡೇಟಾ ಎಂಟ್ರಿ ಮಾಡಲು ಶಿಕ್ಷಕರು ಅಥವಾ ಮುಖ್ಯೋ ಪಾಧ್ಯಾಯರಿಗೆ ಯಾವುದೇ ಅಧಿಕಾರಿ ಮೌಖಿಕ ಅಥವಾ ಲಿಖಿತ ಆದೇಶ ನೀಡುವಂತಿಲ್ಲ.

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಜಿಲ್ಲಾ ಉಪನಿರ್ದೇ ಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಸರ್ಕಾರ ಹೊರಡಿಸಿರುವ ಈ ಹೊಸ ಮಾರ್ಗಸೂಚಿ ಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸರ್ಕಾರಿ ಶಾಲೆಗಳಲ್ಲಿ ಬೋಧನೆಗೆ ಅಡ್ಡಿಯಾಗುವ ಆಡಳಿತಾತ್ಮಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿವೆ. ಸರ್ಕಾರದ ಈ ಕ್ರಮದಿಂದ ಶಿಕ್ಷಕರು ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳ ಕಲಿಕೆ ಮತ್ತು ಬೋಧನೆಗೆ ಮೀಸಲಿಡಲಿದ್ದು, ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತಷ್ಟು ಸುಧಾರಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಇದೆಲ್ಲಾ ಸರಿ ಆದರೆ ಸರ್ಕಾರಿ ಶಾಲೆಗಳಲ್ಲಿನ ಕೆಲವೊಂದಿಷ್ಟು ಕೆಲಸ ಕಾರ್ಯಗಳನ್ನು ಮಾಡಲು ಬೇರೆ ಸಿಬ್ಬಂದಿ ಗಳು ಇಲ್ಲ ಹೀಗಾಗಿ ಇಲ್ಲಿನ ಕೆಲಸಗಳನ್ನು ಶಿಕ್ಷಕರೇ ಮಾಡಬೇಕು ಮೊದಲು ಈ ಕಾರ್ಯಗಳನ್ನು ಮಾಡಲು ಪರ್ಯಾಯ ವ್ಯವಸ್ಥೆ ಮಾಡಿ ಶಿಕ್ಷಕರ ಬಾರವನ್ನು ಕಡಿಮೆ ಮಾಡಿ ನಂತರ ಈ ಒಂದು ಆದೇಶ ಮಾಡಿದರೆ ಸಾರ್ಥಕವಾಗುತ್ತದೆ.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.