ಗದಗ –
ಶಾಲಾ ಆಟದ ಅವಧಿಯಲ್ಲಿ ಕಾಡು ಔಡಲ ಬೀಜಗಳನ್ನು ತಿಂದು 25ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಮಕ್ಕಳು ತೀವ್ರವಾಗಿ ಅಸ್ವಸ್ಥ ಗೊಂಡಿರುವ ಆಘಾತಕಾರಿ ಘಟನೆ ಗದಗ ತಾಲೂಕಿನ ಬ್ರಹ್ಮಾ ನಂದಪುರ ತಾಂಡಾದಲ್ಲಿ ನಡೆದಿದೆ.ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಪಕ್ಕದಲ್ಲೇ ಕಾಡು ಔಡಲ ಮರವಿದ್ದು, ಸಂಜೆ ಆಟ ಆಡುವ ಸಮಯದಲ್ಲಿ ಮಕ್ಕಳು ಕುತೂಹಲದಿಂದ ಅದರ ಕಾಯಿಗಳನ್ನು ಒಡೆದು ಒಳಗಿದ್ದ ಬೀಜಗಳನ್ನು ತಿಂದಿದ್ದಾರೆ.
ವಾಂತಿ-ಭೇದಿಯಿಂದ ನರಳಿದ ಪುಟಾಣಿಗಳು ಬೀಜ ಸೇವಿಸಿದ ಕೆಲವೇ ಸಮಯದ ನಂತರ 2, 3 ಮತ್ತು 4ನೇ ತರಗತಿಯ ಪುಟಾಣಿ ಮಕ್ಕಳಲ್ಲಿ ತೀವ್ರ ಹೊಟ್ಟೆ ನೋವು ವಾಂತಿ, ಭೇದಿ ಹಾಗೂ ತಲೆಸುತ್ತು ಕಾಣಿಸಿಕೊಂಡಿದೆ ಒಟ್ಟು 18 ಬಾಲಕಿಯರು ಹಾಗೂ 9 ಬಾಲಕರು ಸೇರಿದಂತೆ ಸುಮಾರು 27 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಶಾಲಾ ಸಿಬ್ಬಂದಿ ಮತ್ತು ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ತಕ್ಷಣವೇ ಅಸ್ವಸ್ಥ ಗೊಂಡ ಎಲ್ಲಾ ಮಕ್ಕಳನ್ನು ಗದಗಿನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಾಡು ಔಡಲ ಸಸ್ಯವನ್ನು ಸಾಮಾನ್ಯವಾಗಿ ಜೈವಿಕ ಇಂಧನ ತಯಾರಿಕೆಗೆ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸ ಲಾಗುತ್ತದೆ ಆದರೆ ಇದರ ಬೀಜಗಳು ವಿಷಕಾರಿ ಅಂಶವನ್ನು ಹೊಂದಿರುವುದರಿಂದ ಇವುಗಳನ್ನು ನೇರವಾಗಿ ಸೇವಿಸಿದರೆ ಮನುಷ್ಯನ ಜೀರ್ಣಾಂಗ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಕ್ಕಳು ಅರಿಯದೇ ಈ ಬೀಜಗಳನ್ನು ತಿಂದಿದ್ದ ರಿಂದ ಈ ಅನಾಹುತ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಸದ್ಯ ಆಸ್ಪತ್ರೆಯಲ್ಲಿ ಮಕ್ಕಳಿಗೆ ತುರ್ತು ಚಿಕಿತ್ಸೆ ಮುಂದುವರಿದಿದ್ದು, ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲ ಗಳು ತಿಳಿಸಿವೆ ಶಾಲಾ ಆವರಣದ ಸುತ್ತಮುತ್ತ ಇಂತಹ ಗಿಡ ಗಳಿದ್ದರೆ ಎಚ್ಚರದಿಂದ ಇರುವಂತೆ ಪೋಷಕರು ಮತ್ತು ಶಿಕ್ಷಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಅನಸೂಯಾ ಸುದ್ದಿ ಸಂತೆ ನ್ಯೂಸ್ ಗದಗ…..



