ಧಾರವಾಡ –
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2 ಕೋಟಿ ರೂಪಾಯಿ ಅನುದಾನದಲ್ಲಿ ಧಾರವಾಡ ತಾಲೂಕಿನ ಬೇಲೂರ ಗ್ರಾಮ ದಲ್ಲಿ ಕುಡಿಯುವ ನೀರಿನ ಪೈಪ್ ಲೈನ ಅಳವಡಿಸುವುದು ಮತ್ತು ಮನೆಗಳಿಗೆ ನಳ ಜೋಡಣೆ ಕಾಮಗಾರಿಗೆ ಶಾಸಕ ರಾದ ಅಮೃತ ದೇಸಾಯಿ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಶಾಸಕರಾದ ಅಮೃತ ದೇಸಾಯಿಯವರು ಮಾತನಾಡಿ ಬೇಲೂರು ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಎರಡು ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಚುನಾವಣೆ ಪೂರ್ವದಲ್ಲಿ ಬೇಲೂರು ಜನತೆಗೆ ನಾನು ಕೊಟ್ಟ ಭರವಸೆಯನ್ನು ಈಡೇರಿಸುತ್ತಿದ್ದೇನೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಉತ್ತಮ ಗುಣಮ ಟ್ಟದ ಕಾಮಗಾರಿಯನ್ನು ಮಾಡುವ ಮೂಲಕ ಜನರ ಮೆಚ್ಚುಗೆ ಕಳಿಸಬೇಕು ಎಂದು ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ಬೇಲೂರ ಗ್ರಾಪಂ.ಅಧ್ಯಕ್ಷರಾದ ಅಕ್ಕ ಮಹಾದೇವಿ ಬಡವಣ್ಣವರ,ಉಪಾಧ್ಯಕ್ಷರಾದ ಮಹಾವೀರ ಅಂಕಲಗಿ,ಸದಸ್ಯರಾದ ವೈಶಾಲಿ ಹುಲಂಬಿ, ಶಿವರಾಜಕು ಮಾರ ಕುರಿ,ಬಸವರಾಜ ಚಿಕ್ಕಣ್ಣವರ,ಯಲ್ಲಪ್ಪ ಕಡ್ಲಿ, ಮಾದೇವ ದಂಡಿನ,ಬಸವರಾಜ ನಾಯಕರ,ಮಂಜು ಗೋಕಾವಿ ಗ್ರಾಮದ ಗುರು ಹಿರಿಯರು ಹಾಜರಿದ್ದರು.