ಬೆಂಗಳೂರು –
BLO ಶಿಕ್ಷಕಿಯರ ಸಮಸ್ಯೆಗೆ ಪರಿಹಾರ ಕೋರಿ ಫುಲೆ ಶಿಕ್ಷಕಿ ಯರಿಂದ ಮಹಿಳಾ ಆಯೋಗಕ್ಕೆ ಮನವಿಯನ್ನು ನೀಡಲಾಯಿತು ಡಾ.ನಾಗಲಕ್ಷ್ಮಿ ಚೌಧರಿ ರವರಿಂದ ಉತ್ತಮ ಸ್ಪಂದನೆ ಹೌದು
ಡಾ. ನಾಗಲಕ್ಷ್ಮಿ ಚೌದರಿಯವರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇವರಿಗೆ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿ ಯರ ಸಂಘ (ರಿ) ಬೆಂಗಳೂರು ದಕ್ಷಿಣ ವಲಯ-4 ಘಟಕದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು
ಹೆಮ್ಮೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷ ರಾದ ಡಾ. ಲತಾ ಎಸ್ ಮುಳ್ಳೂರ ಅವರ ಮಾರ್ಗದರ್ಶನದಂತೆ ಬೆಂಗಳೂರು ದಕ್ಷಿಣ ವಲಯ-4ರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಡಾ. ನಾಗಲಕ್ಷ್ಮಿ ಚೌದರಿ ಅವರನ್ನು ಭೇಟಿ ಮಾಡಿ SIR ಮತ್ತು BLO ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕಾಗಿ ವಿನಂತಿಸಲಾಯಿತು
ಶ್ರೀಯುತರು ಸಮಸ್ಯೆಗಳನ್ನು ಆಲಿಸಿ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣವೇ ಸೂಕ್ತ ಪರಿಹಾರಕ್ಕಾಗಿ ಕ್ರಮ ವಹಿಸಲಾಗುವುದು ಎಂದರು.
ಶಾಲೆಯ ಎಲ್ಲಾ ಶಿಕ್ಷಕರನ್ನು SIR ಮತ್ತು BLO ಕಾರ್ಯಗಳಿಗೆ ನಿಯೋಜಿಸಿರುವುದರಿಂದ ಇದೀಗ ತಾನೇ ಶೈಕ್ಷಣಿಕ ವರ್ಷ ಪ್ರಾರಂಭ ವಾಗಿದ್ದು ಶಿಕ್ಷಕರು ಶಾಲೆ ಮತ್ತು SIR ಎರಡು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. SIR ಕಾರ್ಯಕ್ಕೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸಮಯ ನಿಗದಿ ಮಾಡಿದ್ದು ಹೆಚ್ಚು ಶಿಕ್ಷಕಿಯರೇ ಇರುವ ಕಾರಣ ಅವರಿಗೆ ಸುರಕ್ಷತೆ ಇಲ್ಲದಂತಾಗಿದೆ (ಇದಕ್ಕೆ ಸಂಬಂಧಿಸಿದಂತೆ ಹಲವು ಅಚಾತುರ್ಯ ಘಟನೆಗಳು ನಡೆದಿವೆ)
SIR ಕಾರ್ಯಕ್ಕೆ ಹಾಲುಣಿಸುವ ತಾಯಂದಿರು ಗರ್ಭಿಣಿ ಶಿಕ್ಷಕಿ ಯರು 59 ವರ್ಷ ತುಂಬಿದ ಶಿಕ್ಷಕರು ತೀವ್ರತರ ಕಾಯಿಲೆ ಗಳಿಂದ ಬಳಲುತ್ತಿರುವ ಶಿಕ್ಷಕರು ದೈಹಿಕ ಅಂಗವೈಕಲ್ಯ ಇರುವ ಶಿಕ್ಷಕರನ್ನೂ ನಿಯೋಜನೆ ಮಾಡಿ ಅವರಿಗೆ ಕೆಲಸ ಮಾಡಲೇ ಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.ಶನಿವಾರ ಭಾನುವಾರ ಹಬ್ಬ ಹರಿದಿನ ಎನ್ನದೆ ಕಾರ್ಯನಿರ್ವಹಿಸಲು ಒತ್ತಡ ಕೊಡುತ್ತಿದ್ದಾರೆ
ರಾತ್ರಿ 8 ಗಂಟೆಯ ನಂತರವೂ ಆನ್ಲೈನ್ ಅಲ್ಲಿ ಫಿಲ್ ಮಾಡಲೇ ಬೇಕು ಎಂದು ಒತ್ತಡ ಹಾಕುತ್ತಿದ್ದಾರೆ ಕೆಲವು ಶಾಲೆಗಳ ಮುಖ್ಯ ಶಿಕ್ಷಕರನ್ನು BLO ಕಾರ್ಯಕ್ಕೆ ನಿಯೋಜಿಸಿದ್ದು ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ, ಟಿಸಿ ವಿತರಣೆ, ಅಕ್ಷರ ದಾಸೋಹ, ಮೊಟ್ಟೆ ಬಾಳೆಹಣ್ಣು ವಿತರಣೆ ಲೆಕ್ಕ, LBA, SATS, FLN, Udise plus, MDM ಆನ್ಲೈನ್ ದಾಖಲಿಕರಣ ಈ ಎಲ್ಲಾ ಕಾರ್ಯ ಗಳನ್ನು ಮಾಡಬೇಕಾಗಿರುವುದರಿಂದ ಮುಖ್ಯ ಶಿಕ್ಷಕರು ಮತ್ತು ಶಾಲೆಗೆ ಕನಿಷ್ಠ ಒಬ್ಬ ಹಿರಿಯ ಶಿಕ್ಷಕರನ್ನು ಈ ಕಾರ್ಯಗಳಿಂದ ಬಿಡುಗಡೆ ಮಾಡಬೇಕು.
ಶಾಲೆಯ ಎಲ್ಲಾ ಶಿಕ್ಷಕರು BLO ಮತ್ತು SIR ಕಾರ್ಯಕ್ಕೆ ನಿಯೋಜನೆಯಾಗಿದ್ದು ಶಾಲೆಗೆ ಬರುವ ಮಕ್ಕಳ ಸುರಕ್ಷತೆ ಮತ್ತು ಕಾಳಜಿ ಮಾಡುವವರು ಯಾರು? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ ಇಷ್ಟೆಲ್ಲಾ ಒತ್ತಡಗಳ ನಡುವೆ KAAMS ಹಾಜರಾತಿಯು ನಮ್ಮ ಶಿಕ್ಷಕರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿದೆ ಆದ್ದರಿಂದ ನಮ್ಮ ಶಿಕ್ಷಣ ಇಲಾಖೆಯನ್ನು KAAMS ನಿಂದ ಕೈ ಬಿಡಬೇಕಾಗಿ ಮನವಿ ಮಾಡುತ್ತೇವೆ
ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಅತಿ ಮುಖ್ಯವೆಂದು ಪರಿಗಣಿಸಿ ಸೂಕ್ತ ಪರಿಹಾರವನ್ನು ದೊರಕಿಸಿ ಕೊಡಬೇಕಾಗಿ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಶ್ರೀಮತಿ ಸೌಭಾಗ್ಯ ಜಿಲ್ಲಾ ಅಧ್ಯಕ್ಷರು,ಶ್ರೀಮತಿ ಇಂದಿರಾ ಮುನಿರಾಜು ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಶ್ರೀಮತಿ ಸುನೀತ ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಬಾಲಮಣಿ ತಾಲ್ಲೂರು ಉಪಾಧ್ಯಕ್ಷರು,ಶ್ರೀಮತಿ ಸರಿತಾ ತಾಲ್ಲೂರು ಸಹ ಕಾರ್ಯದರ್ಶಿ,ಶ್ರೀಮತಿ ಪವಿತ್ರ ಸಹ ಕಾರ್ಯದರ್ಶಿ,ಶ್ರೀಮತಿ ಗೀತ ಸದಸ್ಯರು,ಶ್ರೀಮತಿ ಕಾಜಮ್ಮ ಸದಸ್ಯರು,ಶ್ರೀಮತಿ ಸುಜಾತ ಸದಸ್ಯರು.ಶ್ರೀಮತಿ ಆಶಾಲತಾ ಸದಸ್ಯರು,ಶ್ರೀಮತಿ ರೂಪ ಸದಸ್ಯರು ಹಾಜರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



