ಮಳೆಗಾಗಿ ಗ್ರಾಮದೇವತೆಗಳಿಗೆ ಉಡಿ ತುಂಬಿದ ಶಾಸಕ NH ಕೋನರಡ್ಡಿ – ಕ್ಷೇತ್ರದ ರೈತರಿಗಾಗಿ ವಿಶೇಷ ಪ್ರಾರ್ಥನೆ…..ಜನಸೇವಕನ ಕಾರ್ಯಕ್ಕೆ ಸಾಥ್ ನೀಡಿದ ಪತ್ನಿ ,ರೈತರು ,ಅಧಿಕಾರಿಗಳು…..

Suddi Sante Desk
ಮಳೆಗಾಗಿ ಗ್ರಾಮದೇವತೆಗಳಿಗೆ ಉಡಿ ತುಂಬಿದ ಶಾಸಕ NH ಕೋನರಡ್ಡಿ – ಕ್ಷೇತ್ರದ ರೈತರಿಗಾಗಿ ವಿಶೇಷ ಪ್ರಾರ್ಥನೆ…..ಜನಸೇವಕನ ಕಾರ್ಯಕ್ಕೆ ಸಾಥ್ ನೀಡಿದ ಪತ್ನಿ ,ರೈತರು ,ಅಧಿಕಾರಿಗಳು…..

ನವಲಗುಂದ

ರಾಜ್ಯದ ಹಲವು ಕಡೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಯಾಗುತ್ತಿದ್ದರೆ ಇನ್ನೂ ಹಲವೆಡೆ ಮಳೆರಾಯ ಕೈಕೊಟ್ಟಿದ್ದಾನೆ ಇನ್ನೂ ಇತ್ತ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆ ಗಳಿಗೆ ಶಾಸಕ ಕೋನರೆಡ್ಡಿ ಅವರು ಉಡಿ ತುಂಬಿ ಪ್ರಾರ್ಥನೆ ಮಾಡಿದರು

ವಿಧಾನಸಭಾ ಕ್ಷೇತ್ರದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಯಲ್ಲಿ ರೈತರು ಬಿತ್ತನೆ ಮಾಡಿದ ಬೆಳೆ ರಕ್ಷಿಸಲು ಉತ್ತಮ ಮಳೆ ಯಾಗಲಿ’ ಎಂದು ಪ್ರಾರ್ಥಿಸಿ ಶಾಸಕ ಎನ್.ಎಚ್.ಕೋನರಡ್ಡಿ ದಂಪತಿ ಸಮೇತರಾಗಿ ಪಟ್ಟಣದಲ್ಲಿನ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಗೆ ಉಡಿ ತುಂಬಿದರು ಇದಕ್ಕೂ ಮೊದಲು ಪಟ್ಟಣದ ನೀಲಮ್ಮನ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಂಭಹೊತ್ತ ನೂರಾರು ಮಹಿಳೆಯರೊಂದಿಗೆ ಭಜನೆ ಹಾಗೂ ಡೊಳ್ಳು ವಾದ್ಯಗಳ ಮೇಳದೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆ ಇಲ್ಲದೆ ಸಂಕಷ್ಟ ದಲ್ಲಿರುವ ಕ್ಷೇತ್ರದ ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ ದೇವತೆಗಳಲ್ಲಿ ಬೇಡಿಕೊಂಡರು.ಈ ಒಂದು ಸಂದರ್ಭ ದಲ್ಲಿ  ​ತಹಶೀಲ್ದಾರ್ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಸದುಗೌಡ ಪಾಟೀಲ, ದೇವೇಂದ್ರಪ್ಪ ಹಳ್ಳದ, ನರಸಿಂಹ ಇನಾಮತಿ, ಪ್ರಕಾಶ್ ಸಿಗ್ಲಿ,ಪ್ರೇಮಾ ನಾಯ್ಕರ, ಜಯಶ್ರೀ ಕೆರೆಮನಿ, ಶೋಭಾ ಕಲ್ಲಯ್ಯನಮಠ, ಸರಸಮ್ಮ ಜಾಲಗಾರ, ದಾವಲಬಾಯಿ ಅಲ್ಲಿಬಾಯಿ, ನಿಂಗಮ್ಮ ಜಲಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.