ಹುಬ್ಬಳ್ಳಿ –
ಹೌದು ಸಾಮಾನ್ಯವಾಗಿ ಸರ್ಕಾರಿ ಕಚೇರಿ ಗಳಿಗೆ ಯಾವುದೇ ಕೆಲಸ ಕಾರ್ಯಗಳಿಗೆ ಸುತ್ತಾಡೊದು ತಿರುಗಾಡೊದು ಎಂದರೆ ಜೀವ ಸಾಕಾಗಿ ಹೋಗುತ್ತದೆ ಅದರಲ್ಲೂ ತಹಶಿಲ್ದಾರ ಕಚೇರಿ ಗೆ ಅಂದರೆ ಸಾಕಪ್ಪ ಸಾಕು ಎಂಬ ಮಾತು ಅನುಭವಕ್ಕೆ ಬರುತ್ತದೆ ಇಂತಹ ಸಂದರ್ಭದಲ್ಲಿ ಹುಬ್ಬಳ್ಳಿಯ ತಹಶಿಲ್ದಾರರ ಕಚೇರಿ ಈಗ ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಇಲ್ಲಿನ ರೆಕಾರ್ಡ್ ರೂಮ್ ಗೆ ಡಿಜಿಟಲ್ ಟಚ್ ನೀಡಿದ್ದಾರೆ ತಹಸೀಲ್ದಾರ್ ಮಹೇಶ ಗಸ್ತೆ ತಹಸೀಲ್ದಾರ್ ಅವರು.
ಹೌದು ರೈತರು,ಸಾರ್ವಜನಿಕರು ತಮ್ಮ ಭೂದಾಖಲೆ, ಆಸ್ತಿ ದಾಖಲೆಗಾಗಿ ಕಚೇರಿಗೆ ಅಲೆಯುತ್ತಿದ್ದರು ವಾರ, ತಿಂಗಳು ಗಟ್ಟಲೇ ಕಾಯುವ ವ್ಯವಸ್ಥೆ ಇದೆ ಸಧ್ಯ ಇನ್ನೂ ಕಾಯಬೇಕಾಗಿಲ್ಲ. ನಿಮ್ಮದೇ ದಾಖಲೆ ಪಡೆಯಲು ಮಧ್ಯವರ್ತಿಗಳ ದುಂಬಾಲೂ ಬೀಳಬೇಕಿಲ್ಲ. ಇದಕ್ಕೆ ಮುಖ್ಯ ಕಾರಣ ಹುಬ್ಬಳ್ಳಿ ತಹಸೀಲ್ದಾರ್ ಕಚೇರಿ ಈಗ ಸಂಪೂರ್ಣ ಗಣಕೀಕರಣಗೊಂಡಿರುವುದು.

ಹುಬ್ಬಳ್ಳಿಯ ಮಿನಿ ವಿಧಾನ ಸೌಧದಲ್ಲಿರುವ ರೆಕಾರ್ಡ್ ರೂಮ್ ಶೇ. 100% ಡಿಜಿಟಲೀಕರಣಗೊಂಡಿದ್ದು ಯಾವುದೇ ದಾಖಲೆಯು ಕ್ಷಣದಲ್ಲಿ ಲಭ್ಯವಾಗುತ್ತದೆ.ಹಾಗಾಗಿ ನಿಮ್ಮ ಸಮಯ, ಹಣ ಯಾವುದೂ ಈಗ ಅಪವ್ಯಯವಾಗುವುದಿಲ್ಲ ಎಂಬುದು ಸರ್ಕಾರದ ಭರವಸೆ.ಇಂದಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಇದೀಗ ತಹಸೀಲ್ದಾರ್ ಕಚೇರಿಯೂ ಅಪ್ಡೇಟ್ ಆಗಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಭೂದಾಖಲೆಗಳ ಗಣಕೀಕರಣ ಯೋಜನೆಗೆ ಹುಬ್ಬಳ್ಳಿ ಶಹರವನ್ನು ಪೈಲಟ್ ಯೋಜನೆಯಡಿ ಪ್ರಯೋಗಕ್ಕೆ ಒಳಪಡಿಸಿ ಇದೀಗ ಸಂಪೂರ್ಣ ಕಂಪ್ಯೂಟರೈಜ್ಡ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಭೂ ಸುರಕ್ಷಾ ಯೋಜನೆ ಮೂಲಕ ಭೂ ದಾಖಲೆಗಳ ಇ- ಖಜಾನೆ ಸೃಷ್ಟಿಸಲಾಗಿದೆ ಸುಮಾರು ಒಂದು ವರ್ಷ ಮೂರು ತಿಂಗಳಲ್ಲಿ ಹುಬ್ಬಳ್ಳಿ ಶಹರ
ತಹಸೀಲ್ದಾರ್ ಕಚೇರಿ ವ್ಯಾಪ್ತಿಯ ಎಲ್ಲ ದಾಖಲೆಗಳು ಗಣಕೀಕರ ಣಗೊಂಡಿವೆ.
ಸಾರ್ವಜನಿಕರು, ರೈತರಿಗೆ ಅವರ ದಾಖಲೆಗಳನ್ನು ತಕ್ಷಣ ಕೊಡುವ ಮತ್ತು ಅತ್ಯಂತ ಹಳೆಯದಾದ ಭೂ ದಾಖಲೆಗಳನ್ನು ಸಂರಕ್ಷಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಕಂದಾಯ ಇಲಾಖೆ ೨೦೨೪ರ ಫೆಬ್ರವರಿ ೧೦ಕ್ಕೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯನ್ನು ಪೈಲಟ್ ಯೋಜನೆಯಡಿ ಆಯ್ಕೆ ಮಾಡಿಕೊಂಡಿತ್ತು. ಇದಕ್ಕಾಗಿ ೧೦ ಡಾಟಾ ಎಂಟ್ರಿ ಆಪರೇಟರ್, ೧೦ ಕಂಪ್ಯೂಟರ್, ಸ್ಕ್ಯಾನರ್ ಮುಂತಾದ ಮೂಲ ಸೌಲಭ್ಯಗಳನ್ನು ನೀಡಲಾಗಿತ್ತು.

ಇವುಗಳನ್ನು ಬಳಸಿಕೊಂಡು ಇದೀಗ ಎಲ್ಲ ದಾಖಲೆಗಳ ಡಿಜಿಟಲೀಕರಣ ಮಾಡಲಾಯಿತು. ಇದುವರೆಗೂ 37.87ಲಕ್ಷ ಪುಟಗಳನ್ನು ಅಪ್ ಲೋಡ್ ಮಾಡಲಾಗಿದೆ. ಕಾಗದದ ಮೇಲಿದ್ದ
ಲಕ್ಷಾಂತರ ದಾಖಲೆಗಳನ್ನು ಕೆಡದಂತೆ ಸ್ಕ್ಯಾನ್ ಮಾಡಿ ಸುರಕ್ಷಿ ತಗೊಳಿಸಲಾಗಿದೆ. 1.41 ಲಕ್ಷ ಕಡತಗಳು ಡಿಜಿಟಲ್ ಆಗಿದ್ದು, ಅವುಗಳನ್ನು ಅಪ್ ಲೋಡ್ ಮಾಡಲಾಗಿದೆ. ಈ ಕಡತಗಳ
ಪೈಕಿ ಪ್ರಮುಖವಾದವುಗಳನ್ನು ಎ ಮತ್ತು ಬಿ ವಿಭಾಗದಲ್ಲಿ ವಿಂಗಡಿಸಲಾಗಿದೆ.

ಕಾಯಂ ಪಹಣಿ,ಡ ಉತಾರ, 7.7 ಎ ಆದೇಶ ಪ್ರತಿ, ಖರೀದಿ ಪತ್ರ, ವಾಟ್ನಿ, ವಾರಸಾ, ಬ್ಯಾಂಕ್ ಭೋಜಾ ದಾಖಲೆಗಳನ್ನು ಈ ಎರಡು ವಿಭಾಗಗಲ್ಲಿ ಸಂಗ್ರಹಿಸಲಾಗಿದೆ. ಕಾಲಾನಂತರದಲ್ಲಿ ವಿಲೇವಾರಿ ಮಾಡಬಹುದಾದ ದಾಖಲೆಗಳನ್ನು ಸಿ ಮತ್ತು ಡಿ ವಿಭಾಗದಲ್ಲಿ ಸಂಗ್ರಹಿಸಿಡಲಾಗಿವೆ.ಪೈಲಟ್ ಪ್ರಾಜೆಕ್ಟ್ ಅಡಿ ಹುಬ್ಬಳ್ಳಿ ಶಹರ ಈ ಸಾಧನೆ ಮಾಡಿದ ನಂತರ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಈ ಯೋಜನೆ ವಿಸ್ತರಿಸಲಾಗಿದೆ.
ಧಾರವಾಡ, ನವಲಗುಂದ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಕುಂದಗೋಳ, ಅಳ್ನಾವರ, ಅಣ್ಣಿಗೇರಿ ಎಲ್ಲ ತಾಲೂಕುಗ ಳಲ್ಲಿಯೂ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಕೆಲ ತಾಲೂಕುಗಳು ಸಹ ಶೇ. ೧೦೦ರಷ್ಟು ಸಾಧನೆ ಮಾಡಿವೆ. ಹಾಗಾಗಿ ಇನ್ಮುಂದೆ ಸಾರ್ವಜನಿಕರು ತಮ್ಮ ದಾಖಲೆಗೆ ತಹಸೀಲ್ದಾರ್ ಕಚೇರಿಗೆ ಬಂದು ಅರ್ಜಿ ಕೊಡಬಹುದು ಇಲ್ಲವೇ ನೇರವಾಗಿ ತಾವೇ ಲಾಗಿನ್ ಮಾಡಿ ಪ್ರಿಂಟ್
ತೆಗೆದುಕೊಳ್ಳಬಹುದು.
ಇದಕ್ಕಾಗಿ www.recordroom.karntaka..gov.in
ಮೂಲಕ ಲಾಗಿನ್ ಆಗಿ ಮೊಬೈಲ್ ನಂಬರ್ ಮೂಲಕ ಒಟಿಪಿ ಪಡೆದು ನೀವಿದ್ದ ಸ್ಥಳದಿಂದಲೇ ದಾಖಲೆ ಪಡೆಯಬಹುದು ಇನ್ನೂ ಇದೇ ವೇಳೆ ತಹಶಿಲ್ದಾರ ಮಹೇಶ್ ಗಸ್ತೆ ಮಾತನಾಡಿ ಸರ್ಕಾರವು ಹುಬ್ಬಳ್ಳಿ ಶಹರ ತಾಲೂಕನ್ನು ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಡಿಜಟಲೀಕರಣಕ್ಕೆ ಪೈಲಟ್ ಪ್ರಾಜೆಕ್ಟ್ ಅಡಿ ಆಯ್ಕೆ ಮಾಡಿಕೊಂಡು ಸವಲತ್ತು ಒದಗಿಸಿತ್ತು.
ಅದರಂತೆ ಕಾಲಮಿತಿಯಲ್ಲಿ ಎಲ್ಲವನ್ನೂ ಗಣಕೀಕೃತ ಮಾಡಲಾಗಿದೆ ಇದೀಗ ಸಾರ್ವಜನಿಕರು,ರೈತರು ಯಾವುದೇ ಅಡೆತಡೆ ಇಲ್ಲದೆ ತಮ್ಮ ದಾಖಲೆ ಪಡೆದುಕೊಳ್ಳಬಹುದು. ಸಮಯ,ಹಣ ಉಳಿತಾಯದೊಂದಿಗೆ ನೆಮ್ಮದಿಯೂ ಸಿಗಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..



