ಧಾರವಾಡ –
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೊಜಿಸಿ ರುವ ನಮ್ಮ ನಗರ ಸ್ವಚ್ಛ ನಗರ ಆಂದೋಲನದ ಅಂಗ ವಾಗಿ ಏರ್ಪಡಿಸಿದಂತಹ ಕಾರ್ಯಕ್ರಮವನ್ನು ಧಾರವಾಡ ದಲ್ಲಿ ಶಾಸಕ ಅಮೃತ ದೇಸಾಯಿ ಪಾಲ್ಗೊಂಡು ಸ್ವಚ್ಚತಾ ಕಾರ್ಯ ಮಾಡಿದರು
ನಗರದ ಸಾಧನಕೇರಿಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಈ ಒಂದು ಕಾರ್ಯಕ್ರಮ ದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಿದರು ಅಲ್ಲದೆ ಕಸವನ್ನು ಹಾರಿಸಿ ಮೆರುಗು ನೀಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಅನಿತಾ ನಾರಾಯಣ ಚಳಗೇರಿ ಹಾಗೂ ವಾರ್ಡಿನ ಗುರುಹಿರಿಯರು ಯುವಮಿತ್ರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಈ ಆಂದೋ ಲನವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಬಾಗಿಯಾದರು.ಸ್ವಚ್ಚ ನಗರ ಉತ್ತಮ ಪರಿಸರ ಕ್ಕೆ ಇರಲಿ ನಮ್ಮೆಲ್ಲರ ಆದ್ಯತೆ ಎಂಬ ಸಂದೇಶವನ್ನು ಶಾಸಕರು ಸಾರ್ವಜನಿಕರಿಗೆ ಕೊಟ್ಟರು