ಪಾವಗಡ –
ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ ಹೌದು ಇತ್ತಿಚೀನ ದಿನಗಳಲ್ಲಿ ರಾಜ್ಯದ ಶಾಲಾ ಶಿಕ್ಷಕರ ಮೇಲೆ ಶೈಕ್ಷಣಿಕ ಚಟುವಟಿಕೆಗಳಿಗಿಂತ ಬೇರೆ ಬೇರೆ ರೀತಿಯ ಚಟುವಟಿಕೆ ಗಳು ಹೆಚ್ಚಾಗುತ್ತಿದ್ದು ಹೀಗಾಗಿ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ ಎಂದು ಶಿಕ್ಷಕರು ಮನವಿ ಮಾಡಿದರು ರಾಜ್ಯ ಸರ್ಕಾರ ಸ್ಪಂದಿಸು ತ್ತಿಲ್ಲ ಹೀಗಾಗಿ
ಶಾಲಾ -ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪಾವಗಡ ದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾ ಯಿತು.ಪಟ್ಟಣದ ಗುರುಭವನದಿಂದ ಹೊರಟ ಶಿಕ್ಷಕರ ಪ್ರತಿಭಟನಾ ಮೆರವಣಿಗೆ ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾರ್ಗವಾಗಿ ತಾಲೂಕು ಆಡಳಿತ ಭವನದ ಬಳಿ ಸಮಾವೇಶಗೊಂಡಿತು.
ಪಾವಗಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗಣ್ಣ ಮಾತನಾಡಿ, ಶಾಲಾ ಶಿಕ್ಷಕರನ್ನು ವಿವಿಧ ಸರ್ಕಾರದ ಕಾರ್ಯಕ್ರಮಗಳಿಗೆ ನಿಯೋಜನೆಗೊಳಿಸಿರುವುದ ರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತಿದೆ.
ಶಿಕ್ಷಕ ರಿಗೆ ಬಿಸಿ ಊಟದ ಜವಾಬ್ದಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರ್ಕಾರ ನೀಡುತ್ತಿರುವ ಮೊಟ್ಟೆಯ ಹಣಕ್ಕೂ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮೊಟ್ಟೆ ದರಕ್ಕೂ ಬಹಳ ವ್ಯತ್ಯಾಸವಿದೆ.
ಶಿಕ್ಷಕರು ತಮ್ಮ ಸ್ವಂತ ಹಣ ಭರಿಸುತ್ತಿರುವುದು ನ್ಯಾಯಸಮ್ಮತ ವಲ್ಲ. ಹಾಗಾಗಿ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ತಕ್ಷಣವೇ ಅನುದಾನ ಹೆಚ್ಚಿಸಬೇಕೆಂದು ಒತ್ತಾಯಿಸಿದರು.ಶಿಕ್ಷಕರ ಮೇಲೆ ಎಸ್ಐಆರ್ ಹಾಗೂ ಬಿಎಲ್ಒ ಮತ್ತು ನಿರಂತರ (ಕೆಎಎಎಂಎಸ್) ತಂತ್ರಾಂಶ ಸುಧಾರಣೆಮಾಡಿ ತಾಂತ್ರಿಕ ತೊಂದರೆಗಳಿಂದ ಶಿಕ್ಷಕರಿಗೆ ವಿವಿಧ ಕೆಲಸದ ಒತ್ತಡ ನೀಡ ಲಾಗುತ್ತಿದೆ. ಇದರಿಂದ ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹಾಗಾಗಿ ಸರ್ಕಾರ ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡದೆ ಶಿಕ್ಷಕರ ಮತ್ತು ಮಕ್ಕಳ ಸ್ನೇಹಿ ವ್ಯವಸ್ಥೆ ರೂಪಿಸಿ, ಮಕ್ಕಳ ಜತೆ ಪಾಠ ಪ್ರವಚನ ಮಾಡಲು ಮಾತ್ರ ನಿಯೋಜಿಸಬೇಕೆಂದು ಒತ್ತಾಯಿಸಿದರು.ಪ್ರಸ್ತುತ ಶಾಲೆಗಳಲ್ಲಿ ಶಿಕ್ಷಕರು ಬೋಧನಾ ಕಾರ್ಯಕ್ಕಿಂತ ಹೆಚ್ಚಾಗಿ ಆಡಳಿತಾತ್ಮಕ ಮತ್ತು ತಾಂತ್ರಿಕ ಕೆಲಸಗಳ ಒತ್ತಡಕ್ಕೆ ಸಿಲುಕಿದ್ದಾರೆ.ಸ್ಯಾಟ್ಸ್, ಯುಡಿಐಎಸ್ಇ, ಎಂಡಿಎಂ, ನಿರಂತರ ಹಾಗೂ ಇನ್ಸ್ಪೆ$ರ್ ಅವಾರ್ಡ್ ಮುಂತಾದ ಆನ್ಲೈನ್ ಕೆಲಸಗಳ ಅತಿಯಾದ ಒತ್ತಡದಿಂದ ಶಿಕ್ಷಕರನ್ನು ಮುಕ್ತ ಗೊಳಿಸಬೇಕು.

ಪ್ರತಿ ಶಾಲೆಗೆ ತಕ್ಷಣವೇ ಒಬ್ಬರು ಡಾಟಾ ಎಂಟ್ರಿ ಆಪರೇಟರ್ಗಳನ್ನು ನೇಮಿಸಬೇಕು. ಬಿಸಿಯೂಟ ಯೋಜನೆ ಜವಾಬ್ದಾರಿ ಯನ್ನು ಬಾಹ್ಯ ಏಜೆನ್ಸಿಗಳಿಗೆ ವಹಿಸಿ ಶಾಶ್ವತ ಪರಿಹಾರ ಕಲ್ಪಿಸ ಬೇಕೆಂದು ಪ್ರಭಟನಾನಿರತ ಶಾಲಾ ಶಿಕ್ಷಕರ ಸಂಘದ ಪದಾಧಿ ಕಾರಿಗಳು ಒತ್ತಾಯಿಸಿದರು.ಬಳಿಕ ಪ್ರತಿಭಟನಾನಿರತ ಶಿಕ್ಷಕರು ತಾಪಂ ಎಡಿ ಮಾರುತಿ ಪ್ರಸಾದ್, ಬಿಇಒ ರೇಣುಕಮ್ಮ ಹಾಗೂ ಗ್ರೇಡ್ 2 ತಹಸೀಲ್ದಾರ್ ಪಿಎಸ್ಅರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಮಾರುತೇಶ್, ಉಪಾಧ್ಯಕ್ಷರಾದ ಗಂಗಾಧರ್, ರಾಮಾಂಜಿ,ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ನಾಗವೀಣಾ ಇದ್ದರು.
ಸುದ್ದಿ ಸಂತೆ ನ್ಯೂಸ್ ಪಾವಗಡ…..



