ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಕೇಂದ್ರಿಕೃತ ವೇತನ ಜಾರಿಗೆ ಸಂಪೂರ್ಣ ಮಾಹಿತಿ…..

Suddi Sante Desk
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಕೇಂದ್ರಿಕೃತ ವೇತನ ಜಾರಿಗೆ ಸಂಪೂರ್ಣ ಮಾಹಿತಿ…..

ಬೆಂಗಳೂರು

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೇಂದ್ರೀಕೃತ ವೇತನ ಪಾವತಿ ವ್ಯವಸ್ಥೆ ಜಾರಿ ಮಾಡಿ ಆದೇಶ ವನ್ನು ಮಾಡಲಾಗಿದೆ ಹೌದು  ಜುಲೈ 2026ರ ಮಾಹೆಯಿಂದ ಸರ್ಕಾರದ ‘ಕೇಂದ್ರೀಕೃತ ವೇತನ ಪಾವತಿ’ ವ್ಯವಸ್ಥೆಯ ಅನುಷ್ಠಾನದ ಕುರಿತು ಸರ್ಕಾರ ಕ್ರಮ ಕೈಗೊಂಡಿದೆ.ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1) ರಲ್ಲಿ ಸರ್ಕಾರವು ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ಮಾಸಿಕ ವೇತನವನ್ನು ಯಾವುದೇ ವಿಳಂಬವಿ ಲ್ಲದೇ ನಿಗದಿತ ಅವಧಿಯೊಳಗಾಗಿ ಪಾವತಿಸುವ ಉದ್ದೇಶದಿಂದ ರಾಜ್ಯವಲಯದ ಎಲ್ಲಾ ಸರ್ಕಾರಿ ನೌಕರರ ವೇತನವನ್ನು ವೇತನ ಮತ್ತು ಲೆಕ್ಕಪತ್ರ ಅಧಿಕಾರಿಯ (PAO) ಮಾದರಿಯಲ್ಲಿ ಕೇಂದ್ರೀ ಕೃತವಾಗಿ ವಿತರಿಸಲು ರಾಜ್ಯ ಕೇಂದ್ರೀಯ ಪಾವತಿ ಖಜಾನೆ ಯನ್ನು ಸೃಜಿಸಿ ಆದೇಶ ಹೊರಡಿಸಲಾಗಿರುತ್ತದೆ.

ಈ ಸಂಬಂಧ ಪ್ರಾಯೋಗಿಕವಾಗಿ ಜೂನ್-2026ರ ಮಾಹೆಯಲ್ಲಿ ಖಜಾನೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ರಾಜ್ಯ ಲೆಕ್ಕ ಪತ್ರ ಇಲಾಖೆಗಳ ಅಧಿಕಾರಿ/ನೌಕರರ ವೇತನವನ್ನು ಯಶಸ್ವಿ ಯಾಗಿ ಈ ಕೇಂದ್ರೀಕೃತ ವೇತನ ಪಾವತಿ ವ್ಯವಸ್ಥೆಯಡಿ ತರ ಲಾಗಿದ್ದು, ಸದರಿ ಇಲಾಖೆಗಳ ಅಧಿಕಾರಿ,ನೌಕರರ ವೇತನವನ್ನು ಸುಸೂತ್ರವಾಗಿ ನಿಗದಿತ ಸಮಯದೊಳಗೆ ಪಾವತಿಸಿ ಪೂರ್ಣ ಗೊಳಿಸಲಾಗಿರುತ್ತದೆ.

ಮುಂದುವರೆದು ಉಲ್ಲೇಖ (1) ರ ಸರ್ಕಾರದ ಆದೇಶದ ಕ್ರಮ ಸಂಖ್ಯೆ 06 ರಲ್ಲಿ “ಕೇಂದ್ರೀಕೃತ ಪಾವತಿ ವ್ಯವಸ್ಥೆಯನ್ನು ಇಲಾಖಾ ವಾರು ಜಾರಿಗೆ ತರುವ ದಿನಾಂಕ, ಕಾರ್ಯವಿಧಾನ ಹಾಗು ವಿವಿಧ ಅಧಿಕಾರಿ/ನೌಕರರು ಹೆಚ್.ಆರ್.ಎಮ್.ಎಸ್-2 ಮತ್ತು ಖಜಾನೆ 2 ರಲ್ಲಿ ಅನುಸರಿಸಬೇಕಾದ ನಿಗದಿತ ವೇಳಾಪಟ್ಟಿ ಕುರಿತು ವಿಸ್ತತ ವಾದ ಮಾರ್ಗಸೂಚಿಯನ್ನು ಆಯುಕ್ತರು,

ಖಜಾನೆ ಇಲಾಖೆ ಇವರು ಹೊರಡಿಸುವುದು” ಎಂದು ತಿಳಿಸ ಲಾಗಿರುತ್ತದೆ ಹಾಗು ಉಲ್ಲೇಖ (2) ರ ಸಭೆಯಲ್ಲಿ ಅರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವಿತೀಯ ಹಂತದಲ್ಲಿ ಅಬಕಾರಿ ಇಲಾಖೆ, ಸಾರಿಗೆ ಇಲಾಖೆ ಮತ್ತು ಸಹಕಾರ ಸಂಘಗಳ ಇಲಾಖೆಗಳ ಅಧಿಕಾರಿ ಮತ್ತು ನೌಕರರ ವೇತನವನ್ನು ಜುಲೈ-2026ರ ಮಾಹೆಯಿಂದ ಕೇಂದ್ರೀಕೃತವಾಗಿ ರಾಜ್ಯ ಕೇಂದ್ರೀಯ ಪಾವತಿ ಖಜಾನೆ ಮೂಲಕ ಪಾವತಿಸಲು ನಿರ್ಧರಿಸಲಾಗಿದ್ದು,

ಅದರನ್ವಯ ಈ ಕೆಳಕಂಡ 03 ಇಲಾಖೆಗಳ ಮಾಸಿಕ ವೇತನ ಪಾವತಿಯನ್ನು ರಾಜ್ಯ ಕೇಂದ್ರೀಯ ಪಾವತಿ ಖಜಾನೆ ಮೂಲಕ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳವುಂತೆ ತಿಳಿಸಲು ನಿರ್ದೇಶಿ ಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.