ಬೆಂಗಳೂರು –
ಮೈಸೂರಿನಲ್ಲಿರುವ ರಾಯಲ್ ಕಾನ್‍ಕಾರ್ಡ್ ಇಂಟರ್ ನ್ಯಾಷನಲ್ ಸ್ಕೂಲ್‍ಗೆ 2022-23ನೆ ಸಾಲಿನಲ್ಲಿ ಆರ್ ಟಿಇ ಮೂಲಕ ದಾಖಲಾಗಿರುವ ಮಕ್ಕಳನ್ನು ಆಡಳಿತ ಮಂಡ ಳಿಯು ತರಗತಿಗಳಿಂದ ಹೊರಗಿಟ್ಟಿದೆ ಎಂದು ಆರ್ ಟಿಇ ಸ್ಟೂಡೆಂಟ್ಸ್ ಅಂಡ್ ಪೇರೆಂಟ್ಸ್ ಆಸೋಸಿಯೇಶನ್ ಆರೋಪಿಸಿದೆ.ಈ ಕುರಿತು ಆಸೋಸಿಯೇಶನ್ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರವನ್ನು ಬರೆದಿದ್ದು ರಾಯಲ್ ಕಾನ್‍ಕಾರ್ಡ್ ಇಂಟರ್ ನ್ಯಾಷನಲ್ ಸ್ಕೂಲ್‍ಗೆ ಆರ್ ಟಿಇ ಕಾಯ್ದೆ ಅಡಿ ದಾಖಲಾದ ಮಕ್ಕಳನ್ನು ತರಗತಿಯಿಂದ ಬಹಿಷ್ಕರಿಸಿರುವ ಬಗ್ಗೆ ಉಪನಿರ್ದೇಶಕರಿಗೆ ತಿಳಿಸಲಾಗಿದೆ. ಉಪನಿರ್ದೇಶಕರು ಆಡಳಿತ ಮಂಡಳಿಗೆ ಮಕ್ಕಳನ್ನು ತರಗತಿಗಳಿಗೆ ಸೇರಿಸಿಕೊಳ್ಳುವಂತೆ ತಿಳಿಸಿದ್ದಾರೆ.ಆದರೆ ಅವರ ಆದೇಶವನ್ನು ಆಡಳಿತ ಮಂಡಳಿ ತಿರಸ್ಕರಿಸಿದೆ ಎಂದು ಉಲ್ಲೇಖಿಸಲಾಗಿದೆ.
ಶಿಕ್ಷಣವು ವಿದ್ಯಾರ್ಥಿಗಳ ಮೂಲಭೂತ ಹಕ್ಕಾಗಿದ್ದು ಅದನ್ನು ಕಾನೂನುಬದ್ದವಾಗಿ ನೀಡಬೇಕು.ಹಾಗಾಗಿ ಆರ್ ಟಿಇ ಅಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಳಿಗೆ ತಾರತಮ್ಯ ಶಿಕ್ಷಣವನ್ನು ನೀಡದೆ ಸರಿಯಾದ ಶಿಕ್ಷಣವನ್ನು ನೀಡಬೇಕು ಎಂದು ಶಿಕ್ಷಣ ಸಚಿವರನ್ನು ಒತ್ತಾಯಿಸಿದೆ.