ಧಾರವಾಡ –
ಹಿಂದೂ ಕಾರ್ಯಕರ್ತ ಪ್ರವೀಣ ಸಾವಿನ ವಿರುದ್ದ ಧಾರವಾಡದಲ್ಲಿ ಬಿಜೆಪಿ ಪಕ್ಷದ ಗ್ರಾಮೀಣ ಪ್ರದೇಶದ ಕಾರ್ಯ ಕರ್ತರು ಸಿಡಿದೆದ್ದಿದ್ದಾರೆ.ಹೌದು ಸಾವಿಗೆ ನ್ಯಾಯ ಸಿಗಬೇಕು ನ್ಯಾಯ ಸಿಗೋವರೆಗೂ ನಾವು ಯಾವುದೇ ಬಿಜೆಪಿ ಕಾರ್ಯಕ್ರಮಕ್ಕೆ ಬಾಗಿಯಾಗಲ್ಲ ಎಂಬ ತೀರ್ಮಾ ನವನ್ನು ಕೈಗೊಂಡಿದ್ದಾರೆ.
ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ನಾವು ಬಾಗಿಯಾಗಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ ಮಾಡಿದ್ದಾರೆ ಕಾರ್ಯಕರ್ತರು.ಧಾರವಾಡ ಗ್ರಾಮೀಣ ಕ್ಷೆತ್ರದ 15 ಜನ ಬಿಜೆಪಿ ಕಾರ್ಯಕರ್ತರ ಈ ಒಂದು ದೃಢವಾದ ನಿರ್ಧಾರ ಕೈಗೊಂಡಿದ್ದಾರೆ
ಧೃಡ ನಿರ್ಧಾರ ತೆಗದುಕೊಂಡು ಪೋಸ್ಟ್ ಮಾಡಿದ್ದಾರೆ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರು.ಇದರೊಂದಿಗೆ ತಮ್ಮ ನೋವಿನಿಂದ ಅಳಲನ್ನು ತೋಡಿಕೊಂಡಿದ್ದಾರೆ.
ಧಾರವಾಡದ ಕಮಲಾಪೂರದ ಬಿಜೆಪಿ ಕಾರ್ಯಕರ್ತರು ಈ ಒಂದು ನಿರ್ಧಾರವನ್ನು ಕೈಗೊಂಡು ಸಿಡಿದೆದ್ದಿದ್ದಾರೆ.