ಉತ್ತರ ಪ್ರದೇಶ –
ಒಂದನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿ ರುವ ಸಂಕಷ್ಟದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರ ಬರೆದಿದ್ದಾಳೆ.ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರವನ್ನು ದೇಶದ ಪ್ರಧಾನಿ ಅವರಿಗೆ ಬರೆದಿದ್ದಾಳೆ.

ಇದರಲ್ಲಿ ‘ನನ್ನ ಹೆಸರು ಕೃತಿ ದುಬೆ.ನಾನು 1 ನೇ ತರಗತಿ ಯಲ್ಲಿ ಓದುತ್ತಿದ್ದೇನೆ.ಮೋದಿಜಿ,ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ.ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್)ಸಹ ದುಬಾರಿಯಾಗಿದೆ ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ.ಈಗ ನನ್ನ ತಾಯಿ ಪೆನ್ಸಿಲ್ ಕೇಳಿ ದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ.ನಾನೇನು ಮಾಡಲಿ ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್ ನ್ನು ಕದಿಯು ತ್ತಾರೆ ಎಂದು ಬಾಲಕಿ ದೂರಿದ್ದಾಳೆ.ಹಿಂದಿಯಲ್ಲಿ ಬರೆದಿ ರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ವಕೀಲರಾಗಿರುವ ಬಾಲಕಿಯ ತಂದೆ ವಿಶಾಲ್ ದುಬೆ ಇದು ನನ್ನ ಮಗಳ ಮನ್ ಕಿ ಬಾತ್ ಆಗಿದೆ.ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ತಾಯಿ ಅವಳನ್ನು ಗದರಿಸಿದಾಗ ಅವಳು ಸಿಟ್ಟಾಗಿ ಈ ರೀತಿಯ ಪತ್ರ ಬರೆದಿದ್ದಾಳೆ ಎಂದಿದ್ದಾರೆ.
ಈ ಪತ್ರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೋಡಿ ದಾಗಲೇ ನನ್ನ ಗಮನಕ್ಕೆ ಬಂದಿದೆ.ನಾನು ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಸಿದ್ಧನಿ ದ್ದೇನೆ ಮತ್ತು ಆಕೆಯ ಪತ್ರವು ಸಂಬಂಧಪಟ್ಟ ಅಧಿಕಾರಿ ಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಛಿಬ್ರಾಮೌ ಎಸ್‌ಡಿಎಂ ಅಶೋಕ್ ಕುಮಾರ್ ಹೇಳಿದರು.