ನವದೆಹಲಿ –
ದೇಶದ ಅಂಗನವಾಡಿ ಸೇವಾ ಯೋಜನೆಗಳ ಲಾಭ ಎಲ್ಲ ಅರ್ಹ ಫಲಾನುಭವಿಗಳಿಗೆ ಸಿಗುತ್ತದಾದರೂ ಅರ್ಹ ಫಲಾನುಭವಿಗಳು ಆನ್‌ಲೈನ್ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಮಾತ್ರ ಅಂಗನವಾಡಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಅಲ್ಲದೆ ಅಂಗನವಾಡಿ ಪ್ರಯೋಜನ ಪಡೆಯಲು ಮಗುವಿನ ಆಧಾರ್ ಕಾರ್ಡ್ ಸಂಖ್ಯೆಯನ್ನು ನೋಂದಾಯಿಸುವ ಅವಶ್ಯಕತೆಯಿಲ್ಲ ಅದರ ಬದಲು ಮಗುವಿನ ತಾಯಿಯ ಆಧಾರ್ ಕಾರ್ಡ್ ನೋಂದಣಿ ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಕ್ಷಮ್ ಅಂಗನವಾಡಿ,ಪೋಷಣ್ 2′ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳಲ್ಲಿ ಈ ವಿಚಾರ ಸೇರಿಸಲಾಗಿದೆ.






















