ಬೆಂಗಳೂರು –
ಸಾರಿಗೆ ನಿಗಮಗಳ ನೌಕರರ ಭವಿಷ್ಯ ನಿಧಿ ಮೊತ್ತವನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನೌಕರರು ಗೊಂದಲಕ್ಕೆ ಸಿಲುಕಿದ್ದರು.ಇದೀಗ ಸರ್ಕಾರ ಅನುದಾನ ಒದಗಿಸಿ ಬಿಡುಗಡೆ ಮಾಡಿ ಆದೇಶ ವನ್ನು ಮಾಡಿ ಗುಡ್ ನ್ಯೂಸ್ ನೀಡಿದೆ.
ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯ ನಿಧಿಗಾಗಿ 800 ಕೋಟಿ ರೂಪಾಯಿ ಮತ್ತು ಇಂಧನ ವೆಚ್ಚವಾಗಿ 259.27 ಕೋಟಿ ರೂಪಾಯಿ ಸೇರಿ ದಂತೆ ಒಟ್ಟು 1,059 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ಅನುದಾನವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿದ್ದು ಹೀಗಾಗಿ ಸಕಾಲಕ್ಕೆ ಭವಿಷ್ಯ ನಿಧಿ ಪಾವತಿ ಯಾಗದೆ ಗೊಂದಲದಲ್ಲಿದ್ದ ಸಾರಿಗೆ ನೌಕರರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.