ಧಾರವಾಡ – ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಪಾರ ಪ್ರಮಾಣದ ಹತ್ತಿ ಬೆಂಕಿಗೆ ಆಹುತಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈ ಒಂದು ಅಗ್ನಿ ಅವಘಡ ನಡೆದಿದೆ. ಕೀರ್ತಿ ಕಾಟನ್ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಂಪನಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ.

ಕೈಗಾರಿಕೆಯ ಪಕ್ಕದಲ್ಲಿ ಹೈ ವೊಲ್ಟೇಜ್ ವಿದ್ಯುತ್ ತಂತಿ ಕಂಬಗಳಿವೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಿಡಿಯೊಂದು ಹತ್ತಿಯ ಮೇಲೆ ಬಿದ್ದಿದೆ . ಒಂದು ಸಣ್ಣ ಬೆಂಕಿಯ ಕಿಡಿ ಕಾಟನ್ ಮಿಲ್ ನಲ್ಲಿನ ಎಲ್ಲಾ ಹತ್ತಿ ಹಂಡಿಗೆಗಳಿಗೆ ಹತ್ತಿಕೊಂಡಿದೆ.

ನೋಡು ನೋಡುತ್ತಲೆ ಮಿಲ್ ನಲ್ಲಿರುವ ಎಲ್ಲಾ ಹತ್ತಿ ಹಂಡಿಗೆಗಳು ಬೆಂಕಿಗೆ ಆಹುತಿಯಾಗಿವೆ. ಶ್ರೀಶೈಲ ನಾಗಪ್ಪ ಗೋಕಾವಿ ಎಂಬುವರಿಗೆ ಈ ಒಂದು ಕಾಟನ್ ಮಿಲ್ ಸೇರಿದೆ. ಬರೊಬ್ಬರಿ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಹತ್ತಿ ಹಂಡಿಗೆಗಳು ಸುಟ್ಟ ಕರಕಲಾಗಿವೆ.
ತಡವಾಗಿ ಬೆಂಕಿಯನ್ನು ನೋಡಿದ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಇನ್ನೂ ಈ ಒಂದು ಬೆಂಕಿಯ ಅವಘಡಕ್ಕೆ ವಿದ್ಯುತ್ ತಂತಿಗಳೇ ಕಾರಣವಾಗಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೀರ್ತಿ ಕಾಟನ್ ಮಿಲ್ ಮಾಲೀಕರಾದ ಶ್ರೀಶೈಲ ಗೋಕಾವಿ ಒತ್ತಾಯಿಸಿದ್ದಾರೆ.

ಇನ್ನೂ ಈ ಒಂದು ವಿಷಯ ತಿಳಿದ ಗರಗ ಪೊಲೀಸ್ ಠಾಣೆ ಸಿಬ್ಬಂದಿ ಕೂಡಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.