ಛತ್ತೀಸಗಡ-
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಛತ್ತೀಸ್ ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ.47 ವರ್ಷದ ದೀಪಕ್ ಕುಮಾರ್ ಸೋನಿ ಎಂಬುವರೇ ಬಂಧಿತರಾಗಿದ್ದಾರೆ ಶಾಲೆ ಯಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ದೀಪಕ್ ಕುಮಾರ್ ಸೋನಿಅಂತರ ಶಾಲಾ ಆಟಗಳಲ್ಲಿ ಖೋ-ಖೋ ಮತ್ತು ಕಬಡ್ಡಿ ಪಂದ್ಯಾವಳಿಗಳಲ್ಲಿ ಹಲವಾರು ಪದಕಗಳನ್ನು ಗೆಲ್ಲುವಲ್ಲಿ ತನ್ನ ಶಾಲೆಯ ವಿದ್ಯಾರ್ಥಿನಿಯರಿಗೆ ಮಾರ್ಗದ ರ್ಶನ ನೀಡುತ್ತಿದ್ದ ಎನ್ನಲಾಗಿದೆ.
ಶಿಕ್ಷಕನಿಂದ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅನುಚಿ ತವಾಗಿ ತಮ್ಮನ್ನು ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿ ಐವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ದೂರು ದಾಖಲಿಸಿದ್ದಾರೆ.ವಿದ್ಯಾರ್ಥಿನಿ ಶಿಕ್ಷಕನಿಗೆ ಫೋನ್ ಮಾಡಿದಾಗ ಶಿಕ್ಷಕನ ನಿಜ ರೂಪ ಬಯಲಾಗಿದೆ.ಫೋನ್ ನಲ್ಲಿ ಮಾತಾಡುವ ವೇಳೆ ಹುಡುಗಿಯ ತಾಯಿ ಸ್ಫೀಕರ್ ಆನ್ ಮಾಡಿದ್ದಾರೆ.ಈ ವೇಳೆ ಶಿಕ್ಷಕನ ಅಸಭ್ಯ ಮಾತು ಕೇಳಿ ಬಾಲಕಿಯ ತಾಯಿ ಬೆಚ್ಚಿಬಿದ್ದಿದ್ದರು.ಈ ಬಳಿಕ ಶಿಕ್ಷನ ಅಸಲಿ ಮುಖ ಬಹಿರಂಗಗೊಂಡಿದೆ.ನಂತರ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಹುಡುಗಿಯರು ಶಿಕ್ಷಕನ ವರ್ತನೆಯನ್ನು ವಿರೋಧಿಸಿದಾಗ, ಶಿಕ್ಷಕ ಆಟಗಳಲ್ಲಿ ಪದಕಗಳನ್ನು ಗೆಲ್ಲಲು ಸಹಾಯ ಮಾಡು ವುದರಿಂದ ಆತನ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ನವೀನ್ ಬೋರ್ಕರ್ ತಿಳಿಸಿದ್ದಾರೆ