ಧಾರವಾಡ –
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಡಗಿನಲ್ಲಿ ಮೊಟ್ಟೆ ಎಸೆದ ಬೆನ್ನಲ್ಲೇ ಈ ಒಂದು ಘಟನೆಯನ್ನು ಖಂಡಿಸಿ ರಾಜ್ಯಾಧ್ಯಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಮುಖಂ ಡರು ಬೀದಿಗಿಳಿದು ಹೋರಾಟವನ್ನು ಮಾಡಿದ್ದು ಹುಬ್ಬಳ್ಳಿ ಧಾರವಾಡದಲ್ಲೂ ಕೂಡಾ ಪ್ರತಿಭಟನೆಯನ್ನು ಮಾಡಲಾ ಯಿತು.ಇಂದು ನಡೆದ ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೇಸ್ ಪಕ್ಷದವರು ಪ್ರತಿಭಟನೆಯ ಕೊನೆಯಲ್ಲಿ ವೀರ ಸಾರ್ವಕರ್ ಭಾವಚಿತ್ರ ವನ್ನು ದಹನ ಮಾಡಿ ಕಾಲಿಗೆ ತುಳಿದಿದ್ದು ಕಂಡು ಬಂದಿತು. ಈ ಒಂದು ಹೋರಾಟ ಮುಕ್ತಾಯವಾಗುತ್ತಿದ್ದಂತೆ ಇತ್ತ ಈ ಒಂದು ಘಟನೆಯಿಂದ ಸಿಡಿದೆದ್ದ ಹಿಂದೂ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ಮಾಡುತ್ತಿದ್ದಾರೆ
ಕಾರಿ .ವೀರ ಸಾವರ್ಕರ್ ಗೆ ಅವಮಾನ ಆರೋಪ ಮಾಡಿ ದ್ದಾರೆಂದು ಆಕ್ರೋಶಗೊಂಡು ನಗರದಲ್ಲಿ ಪ್ರತಿಭಟನೆ ಯನ್ನು ಮಾಡುತ್ತಿದ್ದಾರೆ.ರಸ್ತೆಯಲ್ಲೇ ನಿಂತುಕೊಂಡು ರಸ್ತೆ ಮಧ್ಯದಲ್ಲಿಯೇ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿ ದ್ದಾರೆ.ಬೆಳಗಾವಿ ಧಾರವಾಡ ರಸ್ತೆ ಬಂದ್ ಮಾಡಿರುವ ಬಜರಂಗದಳ, ಬಿಜೆಪಿ, ವಿಶ್ವ ಹಿಂದೂ ಪರಿಷತ್,ವೀರ ಸಾವರ್ಕರ್ ಗೆಳೆಯರ ಬಳಗ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳ ಮುಖಂಡರು ಕಾರ್ಯಕ ರ್ತರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಮಾಡುತ್ತಿದ್ದಾರೆ.
ಇನ್ನೂ ಮುಂಜಾಗೃತೆಯ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಇತ್ತ ಸುದ್ದಿ ತಿಳಿದು ಸ್ಥಳಕ್ಕೆ ಡಿಸಿಪಿ ಸಾಹಿಲ್ ಬಾಗ್ಲಾ ಆಗಮಿಸಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಆಗಮಿಸಿದ್ದು ಬರುತ್ತಿ ದ್ದಂತೆ ಸಾಹಿಲ್ ಬಾಗ್ಲಾ ಜೊತೆಗೆ ಪ್ರತಿಭಟನಾಕಾರರು ಮಾತಿನ ಚಕಮಕಿಯನ್ನು ಮಾಡಿದರು.
ಪ್ರತಿಭಟನೆ ಅಂತ್ಯಗೊಳಿಸಿ ಎಂದು ಡಿಸಿಪಿ ಮನವಿ ಮಾಡಿದರು.ಸ್ಥಳಕ್ಕೆ ಪೊಲೀಸ್ ಕಮಿಷನರ್ ಬರಬೇಕು ಅವಮಾನ ಮಾಡಿದವರನ್ನು ಬಂಧನ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ವೀರ ಸಾವರ್ಕರ್ ಅವಮಾನ ಮಾಡಿದವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ.
ರಘುಪತಿ ರಾಘವ ರಾಜಾರಾಮ್ ಹಾಡು ಹಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ.ಹಿಂದೂ ಸಂಘಟ ನೆಗಳ ಕಾರ್ಯಕರ್ತರಿಂದ ನಿರಂತರ ಪ್ರತಿಭಟನೆ ನಡೆಯು ತ್ತಿದೆ.ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ ಕಾರ್ಯಕ ರ್ತರು.ಬಜರಂಗದಳ ಬಿಜೆಪಿ ವಿಶ್ವ ಹಿಂದೂ ಪರಿಷತ್ ವೀರ ಸಾವರ್ಕರ್ ಗೆಳೆಯರ ಬಳಗ ಭಾರತೀಯ ಜನತಾ ಪಾರ್ಟಿ ಸೇರಿದಂತೆ ಹಲವಾರು ಸಂಘಟನೆಗಳ ಮುಖಂ ಡರು ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡ್ತಾ ಇದ್ದಾರೆ.