ಬೆಂಗಳೂರು –
ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.ಹೌದು ಸೆಪ್ಟೆಂಬರ್ ನಲ್ಲಿ 2022 -23ನೇ ಸಾಲಿನ ಸಾಮಾನ್ಯ ವರ್ಗಾವಣೆ ನಡೆಸಲು ಅನುಮತಿ ನೀಡಲಾಗಿ ದ್ದು ಸೆಪ್ಟೆಂಬರ್ 2 ರೊಳಗೆ ಮಾಹಿತಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಕಳೆದ ವರ್ಷ ಅವಕಾಶ ಸಿಗದೇ ವರ್ಗಾವಣೆಗಾಗಿ ಕಾಯು ತ್ತಿದ್ದ ಶಿಕ್ಷಕರಿಗೆ ಈ ಮೂಲಕ ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ.ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ಅಧಿನಿಯಮದ ಅನ್ವಯ ವರ್ಗಾವಣೆ ನಡೆಸಲಾಗುವುದು.ಪ್ರಸಕ್ತ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಸೆಪ್ಟಂಬರ್ ನಲ್ಲಿ ಪ್ರಾರಂಭಿಸಲಾ ಗುತ್ತದೆ.ಇದಕ್ಕೆ ಪೂರ್ವಭಾವಿಯಾಗಿ ಶಿಕ್ಷಕ ಮಿತ್ರ ತಂತ್ರಾಂ ಶದಲ್ಲಿ ಶಿಕ್ಷಕರ ಸೇವಾ ವಿರೋಧಗಳನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನು ಸೆಪ್ಟೆಂಬರ್ 2 ರೊಳಗೆ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಿವೃತ್ತಿ ಹೊಂದಿದ ಶಿಕ್ಷಕರು ಸ್ವಯಂ ನಿವೃತ್ತಿ ಅಕಾಲಿಕ ಮರಣ ಹೊಂದಿದ ಶಿಕ್ಷಕರ ವಿವರ ಅನುದಾನಿತ ಸಂಸ್ಥೆಯ ಶಿಕ್ಷಕರ ಸರ್ಕಾರಿ ಶಿಕ್ಷಕರೆಂದು ನಮೂದಿಸಿರುವ ಪ್ರಕರಣ ಗಳು ಅಮಾನತು ಆದ ಶಿಕ್ಷಕರ ವಿವರ ಪ್ರಾಥಮಿಕ ಶಿಕ್ಷಕ ರನ್ನು ಪ್ರೌಢಶಾಲೆ ಶಿಕ್ಷಕರಾಗಿ ಬಡ್ತಿ ನೀಡಿದ ಪ್ರಕರಣಗಳ ವಿವರ ನೀಡುವಂತೆ ತಿಳಿಸಲಾಗಿದೆ.