ಸಾಪ್ಟವೇರ್ ಬಳಸಿ ಕಾರು ಕಳ್ಳತನ – ಮನೆಯ ಮುಂದೆ ಕಾರು ನಿಲ್ಲಿಸುವ ಮುನ್ನ ಯೋಚಿಸಿ

Suddi Sante Desk

ಬೆಳಗಾವಿ –

ಸಾಫ್ಟವೇರ್ ಬಳಸಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಆಟೋ ನಗರದಲ್ಲಿ ಈ ಒಂದು ಕಳ್ಳತನ ನಡೆದಿದ್ದು ಹೈಟೆಕ್ ಕಳ್ಳರಿಂದ ಕೃತ್ಯ ನಡೆದಿದೆ. ನಗರದ ಆಟೋ ನಗರದಲ್ಲಿನ ಮನೆಯ ಮುಂದೆ ಇನ್ನೊವಾ ಹೊಸ ಕಾರನ್ನು ನಿಲ್ಲಿಸಲಾಗಿದೆ. ನಾಲ್ಕೈದು ಕಾರುಗಳೊಂದಿಗೆ ನಿಲ್ಲಿಸಿದ್ದ ಕಾರನ್ನು ಕಳ್ಳರು ಹೈಟೇಕ್ ಆಗಿ ಕಳ್ಳತನ ಮಾಡಿಕೊಂಡು ಎಸ್ಕೇಫ್ ಆಗಿದ್ದಾರೆ.

17 ಲಕ್ಷ ಮೌಲ್ಯದ ಹೊಸ ಮಾದರಿಯ ಇನ್ನೋವಾ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರ ಬಳಿ ಬಂದು ಸಾಫ್ಟ್‌ವೇರ್ ಬಳಿಸಿ ಲಾಕ್ ಓಪನ್ ಮಾಡಿ ಖದೀಮರು ನಂತರ ಕಾರ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಕಳ್ಳತನ 15 ದಿನಗಳ ಹಿಂದೆ ನಡೆದಿದ್ದು ಘಟನೆಯಾಗಿದೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪ್ರಕರಣವನ್ನು ದಾಖಲು ಮಾಡಿಕೊಂಡಿರು ಮಾಳಮಾರುತಿ ಪೊಲೀಸರು ಸಾಪ್ಟ್ ವೇರ್ ಬಳಸಿ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಂಧನಕ್ಕೇ ಜಾಲ ಬೀಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.