ಹುಬ್ಬಳ್ಳಿ –
ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶೋತ್ಸವ ಆಚರಣೆ ವಿಚಾರ ಕುರಿತು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಈಗ ಇತ್ತ ಗಣೇಶ ನನ್ನು ಅದ್ದೂರಿಯಾದ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ ಮಾಡಲು ಪ್ಲಾನ್ ಮಾಡಲಾಗಿತ್ತು ಆದರೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾದ ಹಿನ್ನೆಲೆಯಲ್ಲಿ ಗಜಾನನ ಮಹಾ ಮಂಡಳಿ ಯವರು ಎಲ್ಲವನ್ನೂ ಬಿಟ್ಟು ಗಣೇಶ ಮೂರ್ತಿ ತಗೆದುಕೊಂಡು ಬಂದು ಪ್ರತಿಷ್ಠಾಪನೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅಂಜುಮನ್ ಇಸ್ಲಾಂ ಸಂಸ್ಥೆಯ ನಿರ್ಧಾರ ದಿಂದಾಗಿ ಪ್ಲಾನ್ ಬದಲಾವಣೆ ಮಾಡಿ ಕೊಂಡ ಗಜಾನನ ಮಹಾಮಂಡಳಿ ಯವರು ಏಕಾಏಕಿ ಯಾಗಿ ಎಲ್ಲವನ್ನೂ ಬದಿಗಿಟ್ಟು ನಾಲ್ಕೈದು ಜನ ಸೇರಿಕೊಂಡು ಗಣಪತಿ ತಗೆದುಕೊಂಡು ಬಂದಿದ್ದಾರೆ
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲು ಹತ್ತಿದ್ದು ಹೀಗಾಗಿ ತೀರ್ಪು ತೀರ್ಮಾನ ಏನೇ ಬರಲಿ ಸಧ್ಯ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಒಂದು ತೀರ್ಮಾನ ಕೈಗೊಂಡು ಪ್ರತಿಷ್ಠಾಪನೆ ಮಾಡಿದರು
ಗಣೇಶನ ಪ್ರತಿಷ್ಠಾಪನೆ ಸಮಯದಲ್ಲಿ ಬದಲಾವಣೆ ಮಾಡಿ ಬೆಳಿಗ್ಗೆ ಸರಳವಾಗಿ ಪ್ರತಿಷ್ಠಾಪನೆ ಮಾಡಿದರು ಮಧ್ಯಾನ್ಹ 1 ಗಂಟೆ ಬದಲು 7:30ಕ್ಕೆ ಗಣೇಶನ ಪ್ರತಿಷ್ಠಾಪನೆ ಮಾಡಿ ಕೊನೆಗೂ ಗೆಲುವು ಸಾಧಿಸಿದರು.ಮೂರು ಸಾವಿರ ಮಠ ದಿಂದ ನಡೆಯಬೇಕಿದ್ದ ಮೆರವಣಿಗೆ ರದ್ದು ಮಾಡಿ ನಾಲ್ಕು ಜನ ಸೇರಿಕೊಂಡು ಗಣಪತಿ ಮೂರ್ತಿ ಯನ್ನು ತಗೆದು ಕೊಂಡು ಬಂದು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದರು
ಈ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿದೆ ಗಣಪತಿ ಮೂರ್ತಿ.ಸಿಂಹಾಸನಾರೂಢ ಗಣಪತಿ ವಿರಾಜಮಾನ ಆಗಿರುವ ಮೂರ್ತಿ ಯಾಗಿದ್ದು ಉತ್ಸವ ಮೂರ್ತಿ ಬಿಟ್ಟು, ಸಣ್ಣ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ.