ಬೆಳಗಾವಿ –
ಮಕ್ಕಳು ದೇವರ ಸಮಾನ ಮಕ್ಕಳು ಯಾವತ್ತು ಸುಳ್ಳು ಹೇಳುವುದಿಲ್ಲ ಹಾಗಂತ ಒಂದು ಜಗಳದ ಸಾಕ್ಷಿ ಹೇಳಲು ಶಿಕ್ಷಕರು ಶಾಲಾ ಚಿಕ್ಕ ಮಕ್ಕಳನ್ನು ಶಾಲೆಯ ವೇಳೆಯಲ್ಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಬಡಾವಣೆಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರು ಶಾಲೆಯಲ್ಲಿ ಹೊಡೆದಾಡಿಕೊಂಡಿದ್ದಾರೆ.ಈ ಹಿನ್ನೆಲೆಯಲ್ಲಿ ತಮ್ಮ ಪರ ವಾಗಿ ಸಾಕ್ಷಿ ಹೇಳಿಸಲು ಶಿಕ್ಷಕಿ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆದೋಯ್ದಿದ್ದಾರೆ.
ಶಿಕ್ಷಕ ಆರ್.ಎನ್.ಮಡಿವಾಳರ ಮತ್ತು ಶಿಕ್ಷಕಿ ಎಮ್. ಕೆ. ಜಂಬಗಿ ಶಾಲೆಯಲ್ಲಿ ಹೊಡೆದಾಡಿಕೊಂಡವರು.ಇವರಿ ಬ್ಬರೂ ಸಂಬಂಧಿಕರು.ಆಸ್ತಿ ವಿಚಾರವಾಗಿ ಇವರು ಶಾಲೆಯ ಆವರಣದಲ್ಲೇ ಹೊಡೆದಾಡಿಕೊಂಡು ಅವಾಂತರ ಮಾಡಿಕೊಂಡಿದ್ದಾರೆ.ಬಳಿಕ ಶಿಕ್ಷಕಿ ಪೊಲೀಸ್ ಠಾಣೆಯಲ್ಲಿ ಸಾಕ್ಷಿ ಹೇಳಲು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದಾರೆ.
ಈ ಇಬ್ಬರು ಶಿಕ್ಷಕರು 2007 ರಿಂದ ರಾಮನಗರ ಬಡಾವಣೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಬ್ಬರು ಹತ್ತಿರದ ಸಂಬಂಧಿಕರು ಆಗಿರುವುದರಿಂದ ತರಗತಿಯಲ್ಲಿ ಆಗಾಗ ಜಗಳ,ಮನಸ್ತಾಪಗಳು ಸಾಮಾನ್ಯವಾಗಿ ಬಿಟ್ಟಿದೆ. ಇವರಿ ಬ್ಬರ ಜಗಳದಲ್ಲಿ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಉಂಟಾ ಗುವ ಕಾರಣ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈ ಶಿಕ್ಷಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಕರು ಒತ್ತಾಯಿಸುತ್ತಿದ್ಧಾರೆ.ಈ ಶಿಕ್ಷಕರ ವಿರುದ್ಧ ಈಗಾಗಲೇ ನೋಟೀಸ್ ನೀಡಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಡಳಿತ ಉಪ ನಿರ್ದೇಶಕರಾದ ಎಮ್.ಎಲ್ ಹಂಚಾಟೆ ತಿಳಿಸಿದ್ಧಾರೆ.