ಹುಬ್ಬಳ್ಳಿ –
ಹಿಂದಿ ದಿವಸ ಆಚರಣೆ ವಿರುದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಖಂಡಿಸಿದೆ ಹೌದು ವೇದಿಕೆಯ ಮುಖಂಡ ಸುರೇಶ್ ಗೋಕಾಕ್ ಈ ಒಂದು ವಿಚಾರ ಕುರಿತು ಖಂಡಿಸಿದ್ದಾರೆ.ಒಕ್ಕೂಟ ರಾಜ್ಯಗಳನ್ನು ಒಗ್ಗೂಡಿಸಿ ಭಾರತವು ದೇಶವಾಗಿದ್ದು ಒಕ್ಕೂಟ ಭಾರತದ ಸಂವಿಧಾ ನದಲ್ಲಿ 22 ಭಾಷೆಗಳು ಸರಿಸಮಾನ ಎಂದರು
ಹಿಂದಿ ಒಂದೇ ಭಾಷೆಗೆ ನಮ್ಮ ತೆರಿಗೆ ದುಡ್ಡಲ್ಲಿ ಹಿಂದಿ ದಿವಸ ಆಚರಣೆ ಮಾಡುವುದನ್ನು ಕನ್ನಡಿಗರು ಸಹಿಸುವುದಿಲ್ಲ.
ಹಿಂದಿ ಬಾಷಿಗರು ಕನ್ನಡ ದಿನವನ್ನು ಆಚರಿಸುತ್ತಾರಾ…? ಅಥವಾ ಹಿಂದಿ ರಾಜ್ಯಗಳಲ್ಲಿ ಕನ್ನಡಿಗರು ನೆಲೆಸಿದರೆ ಕನ್ನಡಿಗರ ತಾಯಿನುಡಿ ಭಾಷೆಯಲ್ಲಿ ಸೇವೆ ಸಿಗುವುದಿಲ್ಲ ಈ ತಾರತಮ್ಯವೇಕೆ ಎಂದು ಪ್ರಶ್ನೆ ಯನ್ನು ಮಾಡಿದ್ದಾರೆ
ಸರ್ಕಾರ ಇನ್ನಾದರೂ ಎಚ್ಚೆತ್ತು ಹಿಂದಿ ದಿವಸ ಆಚರಣೆಯನ್ನು ಕೈ ಬಿಡಲೇಬೇಕೆಂದು ಒತ್ತಾಯವನ್ನು ಮಾಡಿದರು