ಹುಬ್ಬಳ್ಳಿ – ಮುಗ್ಧ ಗ್ರಾಹಕರನ್ನು ಮೋಸ ಮಾಡಿ ಅವರಿಂದ 330 ಗ್ರಾಂ ಬಂಗಾರ ಹಾಗೂ 5 ಲಕ್ಷ 11 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದ ಆಸಾಮಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುನೀಲ. ಮೋಹನ್. ಪತ್ತಾರ ಬಂಧಿತ ಆರೋಪಿಯಾಗಿದ್ದಾನೆ.

ಇತ ಹುಬ್ಬಳ್ಳಿಯ ಅಕ್ಷಯ ಕಾಲನಿಯ, ಚೇತನಾ ಕಾಲೇಜು ಹಿಂದುಗಡೆ ಬೇರೆ ಬೇರೆ ಸಮಯದಲ್ಲಿ ಬಂಗಾರದ ಆಭರಣ ರಿಪೇರಿ ಮಾಡಿಕೊಡುವುದಾಗಿ.ಜೊತೆಗೆ ಹಂತ ಹಂತವಾಗಿ ಹಣ ತುಂಬಿದವರಿಗೆ ಹಾಲ್ ಮಾರ್ಕ್ ಇರುವ ಚಿನ್ನ ನೀಡುವುದಾಗಿ ಗ್ರಾಹಕರನ್ನು ನಂಬಿಸಿ, ಅವರಿಂದ 330 ಗ್ರಾಂ ಆಭರಣ ಹಾಗೂ 5 ಲಕ್ಷ 11 ಸಾವಿರ ನಗದನ್ನು ತಗೆದುಕೊಂಡು ಹೋಗಿದ್ದನು.ಹಾಗಾಗಿ ಮೋಸ ಹೋದ ಗ್ರಾಹಕರು ವಿದ್ಯಾನಗರ ಪೊಲೀಸ ಠಾಣೆಯ ಮೊರೆಹೋಗಿದ್ದರು. ಈಗ ಬಂಧಿತನಿಂದ ವಿದ್ಯಾನಗರ ಪೊಲೀಸರು,

ಗ್ರಾಹಕರಿಂದ ವಂಚನೆ ಮಾಡಿದ 16 ಲಕ್ಷ 44 ಸಾವಿರ ಮೌಲ್ಯದ 330 ಗ್ರಾಂ ಚಿನ್ನ, 3ಲಕ್ಷ 56 ಸಾವಿರ 4 ನೂರ ರೂಪಾಯಿ ನಗದನ್ನು ವಶಕ್ಕೆ ಪಡಸಿಕೊಂಡಿದ್ದಾರೆ. ಈಗ ಆರೋಪಿ ಸುನೀಲ್‌ನನ್ನು ಬಂಧಿಸಿ ಕಂಬಿ ಹಿಂದೆ ವಿದ್ಯಾನಗರ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಹಾಕಿದ್ದಾರೆ. ಇನ್ಸ್ಪೆಕ್ಟರ್ ಆನಂದ ವನಕುದರಿ, ಪೊಲೀಸ್ ಸಿಬ್ಬಂದಿ ಗಳಾದ ಶಿವಾನಂದ ಬನ್ನಿಕೊಪ್ಪ ,ಬಿ ವಿ ವಿಕ್ಕಬಾಸೂರ ,ಬಸವರಾಜ ಕೋಟಬಾಗಿ,ಬಸವರಾಜ ಕಿತ್ತೂರ,ಯಲ್ಲಪ್ಪ ಶಿಂಡ್ಲೆ,ಎಮ್ ಎನ್ ಗುರಮ್ಮನವರ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.