ಧಾರವಾಡ – ನಾಳೆ ಗ್ರಾಮ ಪಂಚಾಯತಿ ಚುನಾವಣೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳಾಗಿದ್ದು ಧಾರವಾಡದಲ್ಲೂ ಕೂಡಾ ಸಿದ್ದತೆಗಳು ಪೂರ್ಣಗೊಂಡಿವೆ. ಈಗಾಗಲೇ ಧಾರವಾಡ ತಾಲೂಕಿನಾದ್ಯಂತ ಗ್ರಾಮ ಪಂಚಾಯತಿ ಮೊದಲ ಹಂತದ ಚುನಾವಣೆಯ ಕಾವು ಜೋರಾಗುತ್ತಿದ್ದು,
ಇತ್ತ ಮತದಾನಕ್ಕೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ. ಇತ್ತ ಕೆಲವು ಅಭ್ಯರ್ಥಿಗಳು ತಮ್ಮ ಗೆಲ್ಲುವಿಗಾಗಿ ಮಾಟ ಮಂತ್ರದ ಮೊರೆ ಹೋಗುತ್ತಿದ್ದಾರೆ. ಹೌದು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಇಂತಹದೊಂದು ಘಟನೆ ಈಗ ಬೆಳಕಿಗೆ ಬಂದಿದೆ.
ಇನ್ನೇನು ದಿನ ಬೆಳಗಾದರೆ ಮತದಾನ ಇರುವಾಗಲೇ ಮತದಾನ ಕೇಂದ್ರವಾಗಿರುವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಗ ಮಾಟ ಮಂತ್ರ ಮಾಡಿರುವ ವಸ್ತುಗಳು ಪತ್ತೆಯಾಗಿವೆ. ಇದನ್ನು ನೋಡಿ ಹಿರಿಯರು ಈಗ ಇದು ವಾಮ ಮಾರ್ಗದಿಂದ ಚುನಾವಣೆಯಲ್ಲಿ ಗೆಲ್ಲಲು ಈ ರೀತಿಯಾಗಿ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಅಲ್ಲದೆ ಇದರಿಂದ ಗ್ರಾಮಸ್ಥರಲ್ಲೆ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು ಶಿಕ್ಷಣ ಪಡೆಯುವ ಪವಿತ್ರ ಸ್ಥಳದಲ್ಲೇ ಈ ರೀತಿ ಮಾಡಿದ್ದರೆ ಹೇಗೆ ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳುತ್ತಿದ್ದಾರೆ.
ಕಳೆದು ಮೂವತ್ತು ನಲವತ್ತು ವರ್ಷಗಳಿಂದ ಗ್ರಾಮ ಪಂಚಾಯತಿ ಇದ್ದು. ಈ ರೀತಿಯಾದ ಕೃತ್ಯ ಎಂದು ಕಂಡು ಬಂದಿಲ್ಲಾ.
ಈ ಕೃತ್ಯ ಮಾಡಿದವರನ್ನು ಕಂಡು ಹಿಡಿದು, ಅವರಿಗೆ ಮತ್ತೊಮ್ಮೆ ಹಿಂತಹ ಕೃತ್ಯದಲ್ಲಿ ಭಾಗವಹಿಸಬಾರದು ಆ ರೀತಿಯಾದ ಶಿಕ್ಷೆಯನ್ನು ಪೊಲೀಸ ಇಲಾಖೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.