ರಾಜ್ಯದಲ್ಲಿ ಕರ್ಪ್ಯೂ ಇಂದಲ್ಲ ನಾಳೆಯಿಂದ ಜಾರಿ

Suddi Sante Desk

ಬೆಂಗಳೂರು –

ಕರೋನಾದ ಎರಡನೇ ಹಂತದ ವೈರಸ್ ತಡೆಗಟ್ಟಲು ರಾಜ್ಯದಲ್ಲಿ ಇಂದು ರಾತ್ರಿಯಿಂದ ಕರ್ಪ್ಯೂ ಜಾರಿ ಮಾಡಲಾಗಿತ್ತು‌.ದಿಢೀರ್ ರಾತ್ರಿ ಕರ್ಪ್ಯೂ ಘೋಷಣೆಯಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬುಧವಾರ ಘೋಷಿಸಿರುವ ನೈಟ್ ಕರ್ಪ್ಯೂ ನಾಳೆಯಿಂದ ಜಾರಿಯಾಗಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೆಲವು ಬದಲಾವಣೆ ಮಾಡಿದೆ.


ಗುರುವಾರ (ಡಿ.24) ರಂದು ರಾತ್ರಿ 11 ರಿಂದ 5 ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.ನೈಟ್ ಕರ್ಪ್ಯೂ ಸಂದರ್ಭದಲ್ಲಿ ಬಸ್, ರೈಲು ಸಂಚಾರಕ್ಕೆ ಯಾವುದೇ ಅಡತಡೆ ಇರುವುದಿಲ್ಲ. ಬಸ್ ಸಂಚಾರ ನಿರಂತರವಾಗಿ ಓಡಾಡುವುದಕ್ಕೆ ಅವಕಾಶವಿದೆ. ಆಟೋ, ಟ್ಯಾಕ್ಸಿಗಳಿಗೂ ಅವಕಾಶ ಕಲ್ಪಿಸಿದ್ದು, ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು. ರೈಲು, ಬಸ್, ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸಬಹುದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.