ಹಿರಿಯ ಪೊಲೀಸ್ ಅಧಿಕಾರಿ ಡಿ.ರೂಪಾ ಫೋಟೊ ಬಳಸಿ ವಂಚನೆ: ದೂರು ನೀಡಿದ ಗೃಹ ಇಲಾಖೆಯ ಕಾರ್ಯದರ್ಶಿ ಡಿ ರೂಪಾ

Suddi Sante Desk

ಬೆಂಗಳೂರು – ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ವಂಚನೆ ಮಾಡುವವರ ಜಾಲ ಹೆಚ್ಚಾಗುತ್ತಿದೆ‌.ಸಾಮಾನ್ಯವಾಗಿ ಎಲ್ಲಾ ವರ್ಗದ ವ್ಯಕ್ತಿಗಳ ಹೆಸರಿನಲ್ಲಿ ವಂಚಕರು ನಕಲಿ ಫೇಸ್ ಬುಕ್ ಖಾತೆಗಳನ್ನು ಮಾಡಿ ವಂಚನೆ ಮಾಡ್ತಾ ಇದ್ದು ವಂಚಕರು ಪೊಲೀಸ್ ಅಧಿಕಾರಿಗಳನ್ನು ಕೂಡಾ ಬಿಟ್ಟಿಲ್ಲ. ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ಮಾಡಿ ಹಣ ಕೇಳ್ತಾ ಇದ್ದಾರೆ.ಹೌದು ಇದಕ್ಕೆ ಸಾಕ್ಷಿ ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಡಿ ರೂಪಾ.

ಹೌದು ಅಸ್ಸಾಂನ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವುಗಳಿಗೆ ಗೃಹ ಇಲಾಖೆಯ ಕಾರ್ಯದರ್ಶಿ ಡಿ.ರೂಪಾ (ಐಪಿಎಸ್) ಅವರ ಫೋಟೊ ಬಳಸಿ, ಹಲವರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ‌.ಈ ಸಂಬಂಧ ಸೈಬರ್ ಕ್ರೈಂ ಠಾಣೆಯಲ್ಲಿ ‍ಪ್ರಕರಣ ದಾಖಲಾಗಿದೆ.

ಆರೋಪಿ ಮೊದಲಿಗೆ ‘ಸಕೋಲಿನ್ ಚೌಧರಿ ಶರ್ಮಾ’ ಹೆಸರಿನಲ್ಲಿ ಫೇಸ್‍ಬುಕ್‍ ಖಾತೆ ಸೃಷ್ಟಿಸಿದ್ದ. ಅದಕ್ಕೆ ರೂಪಾ ಅವರ ಫೋಟೊ ಬಳಸಿಕೊಂಡು ಹಲವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದಾನೆ.ತಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದು ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ, ಹಲವರ ಮೊಬೈಲ್‌ ನಂಬರ್‌ಗಳನ್ನು ಸಂಗ್ರಹಿಸಿದ್ದ ಎನ್ನಲಾಗಿದೆ.

30ಕ್ಕೂ ಹೆಚ್ಚು ನಂಬರ್‌ಗಳಿದ್ದ ವಾಟ್ಸ್ ಆ್ಯಪ್‌ ಗುಂಪೊಂದನ್ನು ರಚಿಸಿದ್ದ. ಕೆಲವರಿಗೆ ಸಂದೇಶ ಮಾತ್ರವಲ್ಲದೆ, ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿದ್ದ. ಚಾರಿಟಿಯೊಂದರ ವಿಚಾರವಾಗಿ ಹಣ ಕೇಳುತ್ತಿದ್ದ. ಇದನ್ನು ನಂಬಿ ಹಲವರು ಹಣ ದೇಣಿಗೆಯಾಗಿ ನೀಡಿ ವಂಚನೆಗೆ ಒಳಗಾಗಿದ್ದಾರೆ.

‘ಪ್ರಣಾಮಿಕಾ ಮಹಾಂತಾಸ್‌’ ಎಂಬ ಹೆಸರಿನಲ್ಲೂ ಫೇಸ್‌ಬುಕ್‌ನಲ್ಲಿದ್ದ ಖಾತೆಗೆ ರೂಪಾ ಅವರ ಫೋಟೊ ಬಳಕೆ ಮಾಡಲಾಗಿತ್ತು. ಅಲ್ಲಿಯೂ ಹೀಗೇ ವಂಚಿಸುತ್ತಿದ್ದ. ಫೇಸ್‌ಬುಕ್ ಖಾತೆಗಳಿಂದ ಅನುಮಾನಗೊಂಡ ಅಸ್ಸಾಂ ಮೂಲದ ಮೂವರು ಈ ಘಟನೆಗಳನ್ನು ರೂಪಾ ಅವರಿಗೆ ವಿವರಿಸಿದ್ದಾರೆ.

‘ಅಸ್ಸಾಂನಿಂದ ನನಗೆ ಮೂರು ಕರೆಗಳು ಬಂದವು. ಫೇಸ್‌ಬುಕ್‌ನಲ್ಲಿ ನನ್ನ ಫೋಟೊ ಬಳಸಿ, ಮಹಿಳೆ ಧ್ವನಿಯಲ್ಲಿ ಮಾತನಾಡಿ, ಹಲವರಿಗೆ ವಂಚಿಸಿ
ದ್ದಾರೆ. ಇದನ್ನು ಸೈಬರ್‌ ಕ್ರೈಂ ವಿಭಾಗದ ಗಮನಕ್ಕೆ ತಂದಿದ್ದೇನೆ. ಈ ರೀತಿಯ ವಂಚಕರಿಂದ ಸಾರ್ವಜನಿಕರು ಎಚ್ಚರವಾಗಿರಿ. ಇಂತಹವರಿಗೆ ಹಣ ನೀಡಬೇಡಿ’ ಎಂದು ಪೊಲೀಸ್ ಅಧಿಕಾರಿ ರೂಪಾ ಟ್ವೀಟ್‌ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.