ಈ‌ ಕಳ್ಳ‌ ಅಂತಿಂಥವನಲ್ಲ….! ವಿಡಿಯೋ ಒಮ್ಮೆ ನೋಡಿ!

Suddi Sante Desk

ಕಾರವಾರ – ಸಾರ್ವಜನಿಕರೇ ಎಚ್ಚರ ಎಚ್ಚರ ಎಚ್ಚರ…… ನಿಮ್ಮ ಮನೆ ಮುಂದೆ ಬೆಳ್ಳಂಬೆಳಗ್ಗೆ ಹಾಲಿವನು ಹಾಲಿನ ಪ್ಯಾಕೇಟ್ ಇಟ್ಟಾಗ, ಪೇಪರ್ ಹಾಕೋನು ಪೇಪರ್ ಹಾಕಿದಾಗ ತಕ್ಷಣ ಹೋಗಿ ತೆಗೆದುಕೊಳ್ಳಿ.ಇಲ್ಲಾಂದ್ರೆ ನೋಡು ನೋಡ್ರೋಳಗೆ ಅಲ್ಲಿಟ್ಟಿದ್ದ ವಸ್ತುಗಳು ಮಂಗಮಾಯವಾಗ್ತಾವೆ.

ಹೌದು ಕಾರವಾರದ ಗೋಕರ್ಣ ವ್ಯಾಪ್ತಿಯಲ್ಲಿ ಇಂಥಹನೊಬ್ಬ ಚಾಲಾಕಿ ಕಳ್ಳನಿದ್ದಾನೆ. ಬೆಳಗ್ಗೆ ಹೋತ್ನಲ್ಲಿ ಹಾಲು ಮಾರಾಟ ಮಾಡುವರು ಮನೆ ಮನೆಗೆ ಹಾಲಿನ ಪ್ಯಾಕೇಟನ್ನ ಮತ್ತು ಪೇಪರಗಳನ್ನು ಮನೆ ಗೇಟ್ ಬಳಿ ಇಟ್ಟು ಹೋಗ್ತಾರೆ.ಇದನ್ನ ಗಮನಿಸುವ ಆ ವ್ಯಕ್ತಿ ಕ್ಷಣಾರ್ಧದಲ್ಲಿ ಹಾಲಿನ ಪ್ಯಾಕೇಟ್ ಮತ್ತು ಪೇಪರ್ ಗಳನ್ನ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾನೆ.

ಈ ದೃಶ್ಯ ಪಕ್ಕದ ಮನೆಯೊಂದರ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಸದ್ಯ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.ಇನ್ನೂ ಮನೆಯ ಮುಂದೆ ಇಡಲಾಗಿದ್ದ ಪೇಪರ್ ಹಾಲಿನ ಪ್ಯಾಕೆಟ್ ಯಾರು ಕಳ್ಳತನ ಮಾಡ್ತಿದ್ದರು ಇಲ್ಲವೇ ಹಾಲು ಮತ್ತು ಪೇಪರ್ ಹಾಕುವರ ಜೊತೆಯಲ್ಲಿ ಜಗಳ ಮಾಡುತ್ತಿದ್ದ ಸಾರ್ವಜನಿಕರಿಗೆ ಕೊನೆಗೂ ಉತ್ತರ ಸಿಕ್ಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.