ಶಿವಮೊಗ್ಗ –
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಶಿಕಾರಿಪುರ ತಾಲೂಕು ಘಟಕದ ವತಿ ಯಿಂದ NPS ವಿರೋಧಿಸಿ OPS (ಹಳೆ ಪಿಂಚಣಿ) ಜಾರಿಗೆ ಒತ್ತಾಯಿಸಿ ಶಿಕಾರಿಪುರ ನಗರದಲ್ಲಿ ತಾಲೂಕಿನ ಎಲ್ಲಾ ನೌಕರರು ಮತ್ತು ಹಿರಿಯ ನೌಕರರು ಸೇರಿ ಬೃಹತ್ ಪಾದಯಾತ್ರೆಯನ್ನು ನಡೆಸಿದರು.
ಪಾದಯಾತ್ರೆಯು ನರಸಪ್ಪ ಸ್ಮಾರಕ ಬಯಲು ರಂಗ ಮಂದಿರದಿಂದ ಪ್ರಾರಂಭವಾಗಿ ಕಿರಣ್ ಟಾಕೀಸ್ ಸರ್ಕಲ್ ನಿಂದ ಹುಚ್ಚರಾಯಸ್ವಾಮಿ ದೇವಸ್ಥಾನದ ಮೂಲಕ ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪನವರ ಗೃಹ ಕಚೇರಿಗೆ ಭೇಟಿ ನೀಡಿ ಯಡಿಯೂರಪ್ಪನವರು ಮತ್ತು ಸಂಸದರ ಪರವಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಗುರುಮೂರ್ತಿ ರವರು ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ಸುದ್ದಿ ಸಂತೆ ನ್ಯೂಸ್ ಶಿಕಾರಿಪುರ.























