ಮಂಡ್ಯ – .
ಮನೆಯ ಬಾಗಿಲು ಒಡೆದು ಚಿನ್ನಾಭರಣ ಲೂಟಿ ಮಾಡಿದ ಘಟನೆ ಮದ್ದೂರು ಸಮೀಪದ ಸೋಮ ನಹಳ್ಳಿಯಲ್ಲಿ ನಡೆದಿದೆ.ಗ್ರಾಮದ ಲೋಲಾಕ್ಷಮ್ಮ ಎಂಬುವವರ ಮನೆಯಲ್ಲಿ ಈ ಒಂದು ದರೋಡೆ ನಡೆದಿದೆ.ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ, ಒಂದು ಕೆಜಿ ಬೆಳ್ಳಿ ಕಳವು ಆಗಿದೆ.
ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಲೋಲಾಕ್ಷಮ್ಮ.ಮದ್ದೂರು ಪಟ್ಟಣಕ್ಕೆ ಹೋಗಿ ಬರುವುದರೊಳಗೆ ದರೋಡೆ ನಡೆದಿದೆ.ಕೆಲಸ ಮುಗಿಸಿ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಮನೆಯ ಬಾಗಿಲು ಬೀರುವಿನ ಬೀಗ ಒಡೆದು ಕಳ್ಳತನವಾಗಿದೆ.ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ, ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮದ್ದೂರು…..























