ಬೆಂಗಳೂರು –
ಹೆಡ್ಕಾನ್ಸ್ಟೇಬಲ್ ರೊಬ್ಬರು ಲಂಚವನ್ನು ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರೇಗೌಡ ಅವರು ಒಂದೂವರೆ ಲಕ್ಷ ರೂ ಲಂಚ ಪಡೆಯು ವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಮನೆ ನಿರ್ಮಾಣಕ್ಕೆ ಪೊಲೀಸ್ ರಕ್ಷಣೆ ನೀಡಲು 3 ಲಕ್ಷ ರೂ ಲಂಚದ ಬೇಡಿಕೆಯಿಟ್ಟಿದ್ದರು.ಇದರಲ್ಲಿ ಒಂದೂವರೆ ಲಕ್ಷ ರೂಪಾಯಿ ಯನ್ನು ಹೆಡ್ ಕಾನ್‌ಸ್ಟೇಬಲ್ ಮಾರೇಗೌಡ ತಗೆದುಕೊಳ್ಳುತ್ತಿ ದ್ದರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿ ದ್ದಾರೆ.ಪೀಣ್ಯ ಪೊಲೀಸ್ ಠಾಣೆಯ ಹೆಡ್‌ಕಾನ್ ಸ್ಟೇಬಲ್ ಮಾರೇಗೌಡ ಬಂಧಿತ ಆರೋಪಿ ಪೊಲೀಸ್ ಪೇದೆಯಾಗಿದ್ದಾರೆ.
ನೆಲಗದರನಹಳ್ಳಿ ನಿವಾಸಿ ಗವಿರಾಜ್ ಗೌಡ ತಮ್ಮ ಹೆಸರಿನ ಯಶವಂತಪುರ ಹೋಬಳಿಯ ಬಿಬಿಎಂಪಿ ವಾರ್ಡ್‌ವೊಂದರ ಮೂಲೆ ನಿವೇಶನದ ಪೈಕಿ 20×40 ಅಳತೆಯುಳ್ಳ ಖಾಲಿ ನಿವೇಶನವನ್ನು ದಿನೇಶ್ ಎಂಬುವರಿಗೆ ಮಾರಾಟ ಮಾಡಿದ್ದರು.
ನಿವೇಶನದಲ್ಲಿ ದಿನೇಶ್ ಮನೆ ನಿರ್ಮಿಸುತ್ತಿದ್ದರು. ಕೋಕಿಲಾ ಹಾಗೂ ಲಕ್ಷ್ಮಣ್ ರೆಡ್ಡಿ ನಿವೇಶನ ತಮ್ಮದೆಂದು ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ತೊಂದರೆ ನೀಡುತ್ತಿದ್ದರಂತೆ. ಈ ಬಗ್ಗೆ ಸಿವಿಲ್ ನ್ಯಾಯಾಲಯ ದಿನೇಶ್ ಪರ ತಾತ್ಕಾಲಿಕ ಇಂಜೆಕ್ಷನ್ ಆರ್ಡರ್ ನೀಡಿತ್ತು.ಇಷ್ಟಾದರೂ ಕಟ್ಟಡ ನಿರ್ಮಾಣಕ್ಕೆ ತೊಂದರೆ ನೀಡುತ್ತಿದ್ದರಂತೆ
ಹೀಗಾಗಿ ತಮಗೆ ಸೂಕ್ತ ರಕ್ಷಣೆ ನೀಡುವಂತೆ ದಿನೇಶ್ ಪೀಣ್ಯ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದರು. ಹೆಡ್‌ಕಾನ್‌ಸ್ಟೆಬಲ್ ಮಾರೇಗೌಡ ಪೊಲೀಸ್ ರಕ್ಷಣೆಗೆ 3 ಲಕ್ಷ ರೂ.ಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.ಅಂತಿಮವಾಗಿ 1.5 ಲಕ್ಷ ರೂ. ಲಂಚ ನೀಡುವಂತೆ ಕೇಳಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದಾಗ ಮಾರೇಗೌಡ ಬಲೆಗೆ ಬಿದ್ದಿದ್ದಾರೆ ಲಂಚ ಕೊಡಲಿಚ್ಛಿಸದ ದಿನೇಶ್ ಈ ವಿಚಾರವನ್ನು ಗವಿರಾಜ್‌ಗೌಡ ಗಮನಕ್ಕೆ ತಂದಿದ್ದರು.ಗವಿರಾಜ್‌ಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ಕೊಟ್ಟಿದ್ದರು.ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ದಿನೇಶ್ ಅವರಿಂದ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿ ದ್ದಾಗ ಮಾರೇಗೌಡ ಅವರಿಗೆ ಬಲೆ ಬೀಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..