ಬೆಂಗಳೂರು –
ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನದ ಸಲುವಾಗಿ ಜನವರಿ 3ನೇ ತಾರೀಖು ಶಿಕ್ಷಕಿಯರ ದಿನಾಚರಣೆ ಎಂಬುದಾಗಿ ಘೋಷಿಸಿ ಸರ್ಕಾರದ ವತಿಯಿಂದಲೇ ಆಚರಿಸುವಂತೆ ಸೂಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ ಪತ್ರ ಬರೆದಿದ್ದಾರೆ.
ಹೌದು ಈ ಸಂಬಂಧ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪತ್ರವನ್ನು ಬರೆದಿದ್ದು ಮಾತೆ ಸಾವಿತ್ರಿಬಾಯಿ ಫುಲೆ ಇವರನ್ನು ಅಧುನಿಕ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದು ಗುರುತಿಸಲಾಗಿದೆ.ಇವರು 3 ಜನೆವರಿ 1831ರಲ್ಲಿ ಮಹಾರಾಷ್ಟ್ರ ಸಾತಾರ ಜಿಲ್ಲೆಯಲ್ಲಿ ನೈಗಾಂವನಲ್ಲಿ ಜನಿಸಿದರು.
ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾ ಫುಲೆ ಅವರಿಗೆ ಸಲ್ಲಬೇಕು 1847ರಲ್ಲಿ ಇವರು ಶ್ರೀಮತಿ ಮಿಚೆಲ್ ಅವರ ಶಾಲೆಯಲ್ಲಿ ಶಿಕ್ಷಕೀಯ ತರಬೇತಿ ಪಡೆದುರು 1848ರಿಂದ 1852ರ ವರೆಗೆ 18 ಪಾಠ ಶಾಲೆಗಳನ್ನು ಮುಲೆ ದಂಪತಿಗಳು ಬ್ರಿಟೀಷ ಸರ್ಕಾರ ತೆರೆದರು.
ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ಇಂಡಿಯಾ ಫಸ್ಟ ಲೇಡಿ ಟೀಚರ್” ಎಂಬ ಬಿರುದು ಕೊಟ್ಟಿತು ಎಂದಿದ್ದಾರೆ.ಹೀಗಾಗಿ ಇವರ ಜನ್ಮ ದಿನವಾದ ಜನವರಿ 3ರಂದು ಶಿಕ್ಷಕಿಯರ ದಿನಾಚಾರಣೆ ಯನ್ನಾಗಿ ಘೋಷಣೆ ಮಾಡಿ ಸರ್ಕಾರದ ವತಿಯಿಂದ ಆಚರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ವಿನಂತಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..