ಕಲಬುರಗಿ –
ಮೊಬೈಲ್‌ನಲ್ಲಿ ಗಂಟೆಗಟ್ಟಲೇ ಮಾತನಾಡಿ ಒಂದೇ ಕೈಯಿಂದ ಬಸ್ ಓಡಿಸಿದ ಚಾಲಕ ಹೌದು ಕಲಬುರಗಿ-ಅಫಜಲಪುರ ಮಧ್ಯೆ ಈ ಒಂದು ಘಟನೆ ನಡೆದಿದೆ.ಯಾವುದೇ ವಾಹನ ಚಲಾಯಿ ಸುವಾಗ ಚಾಲಕರು ಮೊಬೈಲ್ ಬಳಸುವಂತಿಲ್ಲ ಆದರೆ ಈ ಚಾಲಕ ಮೊಬೈಲ್‌ನಲ್ಲಿ ಮಾತನಾಡು ತ್ತಲೇ ಬಸ್ ಓಡಿಸುತ್ತಾನೆ.
ಅಫಜಲಪುರ ಘಟಕದ KA-32 F 2169 ಬಸ್ ಚಾಲಕ ಕಿರಣ್ ಈ ಒಂದು ಎಡವಟ್ಟು ಮಾಡಿ ಕೊಂಡ ವನಾಗಿದ್ದಾನೆ.ಪ್ರತನಿತ್ಯ ಅಫಜಲಪುರ ದಿಂದ ಕಲಬುರಗಿ ಮಧ್ಯೆ ಸಂಚರಿಸುವ ಕೆಕೆಆರ್ ಟಿಸಿ ಬಸ್ ನಲ್ಲಿ ಈ ಒಂದು ಚಿತ್ರಣವು ಕಂಡು ಬಂದಿದೆ.
ಆತಂಕದಲ್ಲೆ ಪ್ರಯಾಣಿಸುವ ಪ್ರಯಾಣಿಕರು, ಚಾಲಕ ಯಾಮಾರಿದ್ರೆ ಕೈಲಾಸ ಸೇರೋದು ಗ್ಯಾರಂಟಿ ಎಂಬ ಚಿತ್ರಣವು ಬಸ್ ನಲ್ಲಿ ಕಂಡು ಬಂದಿತು.ಚಾಲಕ ಕಿರಣ್ ವಿರುದ್ಧ ಕಠಿಣ ಕ್ರಮ ವನ್ನು ಮೇಲಾಧಿಕಾರಿಗಳು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹವನ್ನು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..