ಹೈದರಾಬಾದ್ –
ಮನೆಯ ಮೇಲೆ ನಿಂತುಕೊಂಡು ಗಾಳಿಪಟ ಹಾರಿಸುವ ಮುನ್ನ ಈ ಸ್ಟೋರಿ ನೋಡಿ ದಿನ ದಿಂದ ದಿನಕ್ಕೆ ಹೆಚ್ಚುತ್ತಿವೆ ಅವಘಡಗಳು ಹೌದು
ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೊರ್ವ ಸಾವಿಗೀಡಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಹೌದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಅಘಾ ತಕಾರಿ ಘಟನೆಯೊಂದು ನಡೆದಿದೆ. ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟ ಧಾರುಣ ಘಟನೆ ನಗರದಲ್ಲಿ ನಡೆದಿದೆ.
ವರ್ಷದ ಆರಂಭದಲ್ಲಿ ಆಚರಿಸುವ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡಾ ಒಂದಾಗಿದ್ದು ಎಳ್ಳು ಬೆಲ್ಲವನ್ನು ಹಂಚಿ ಜನರು ಈ ದಿನ ಸಂಭ್ರಮಿಸು ತ್ತಾರೆ.ಮಕರ ಸಂಕ್ರಾಂತಿಯ ಸಂಭ್ರಮದಲ್ಲಿ ಗಾಳಿಪಟ ಹಾರಿಸುವ ಪದ್ಧತಿ ಕೂಡಾ ಬೆಸೆದು ಕೊಂಡಿದೆ.
ಒಟ್ಟಾಗಿ ಖುಷಿಯಿಂದ ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ ಆದರೆ ಹಬ್ಬ ಸಮೀಪಿಸುತ್ತಿ ದ್ದಂತೆ ಹಬ್ಬದ ಸಂಭ್ರಮದ ನಡುವೆ ಅಘಾತಕಾರಿ ಘಟನೆಯೊಂದು ನಡೆದಿದೆ ಮನೆಯ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ತನಿಷ್ಕ್ (11) ಮೃತಪಟ್ಟಿರುವ ಘಟನೆ ಅತ್ತಾಪುರ ಪ್ರದೇಶದಲ್ಲಿ ನಡೆದಿದೆ.
ಮನೆಗೆ ತಂದಿದ್ದ ಗಾಳಿಪಟ ಹಾರಿಸುವ ಖುಷಿ ಯಲ್ಲಿ ಪುಟ್ಟ ಬಾಲಕ ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ.ಆದರೆ ಟೆರೇಸ್ ಮೇಲೆ ಗಾಳಿಪಟ ಹಾರಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವುದು ಹಬ್ಬದ ಮನೆಯಲ್ಲಿ ಸೂತಕದ ವಾತಾವಾರಣಕ್ಕೆ ಕಾರಣವಾಗಿದ್ದು
ತನಿಷ್ಕ್ ತಮ್ಮ ಮನೆಯ ಮಹಡಿ ಮೇಲೆ ನಿಂತು ಗಾಳಿ ಪಟ ಹಾರಿಸುವ ವೇಳೆ ಗಾಳಿ ಪಟದ ದಾರ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ.ಅದನ್ನು ಬಿಡಿ ಸಲು ಹೋದಾಗ ಬಾಲಕಿನಿಗೆ ವಿದ್ಯುತ್ ಪ್ರವಹಿ ಸಿದೆ.ತಕ್ಷಣ ಬಾಲಕ ಕಿರುಚಿಕೊಂಡಿದ್ದಾನೆ.ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾ ರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಇಂತಹ ಘಟನೆಗಳು ಮೇಲಿಂದ ಮೇಲೆ ನಡೆ ಯುತ್ತಿದ್ದರೂ ಕೂಡಾ ಮಕ್ಕಳು ಪೋಷಕರು ಎಚ್ಚೇತ್ತುಕೊಳ್ಳುತ್ತಿಲ್ಲ ಏನೇ ಆಗಲಿ ನಿಮ್ಮ ಮಕ್ಕಳು ಒಬ್ಬರೇ ಏನಾದರೂ ಮಾಡುವಾಗ ಅವರ ಮೇಲೆ ಒಂದಿಷ್ಟು ಲಕ್ಷ್ಯ ಇರಲಿ ಎಂಬೊದು ಸುದ್ದಿ ಸಂತೆ ಯ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಹೈದರಾಬಾದ್…..