ನವದೆಹಲಿ –
ಮತ್ತೊಮ್ಮೆ ಮೋದಿ ಸರ್ಕಾರ ಗೋಡೆ ಬರಹ ಕಾರ್ಯಕ್ರಮಕ್ಕೆ ಜೆ.ಪಿ. ನಡ್ಡಾ ಚಾಲನೆ ರಾರಾಜಿ ಸುತ್ತಿವೆ ಎಲ್ಲೆಡ ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ ಎಂಬ ಗೋಡೆ ಬರಹ ಹೌದು ಲೋಕಸಭಾ ಚುನಾವಣೆ ಕಾವು ದೇಶದೆಲ್ಲೆಡೆ ಜೋರಾಗುತ್ತಿದ್ದು ಈ ನಡುವೆ ಚುನಾವಣೆ ಯ ಸಿದ್ದತೆಗಳು ಕೂಡಾ ಆರಂಭಗೊಂಡಿವೆ.
ಈ ನಡುವೆ ಇತ್ತ ಬಿಜೆಪಿ ಪಕ್ಷವು ಮತ್ತೊಮ್ಮೆ ಅಧಿಕಾರ ಹಿಡಯುವ ಕನಸಿನಲ್ಲಿದ್ದು ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ ಎಂಬ ಎಂಬ ಗೋಡೆ ಬರಹವ ಕಾರ್ಯಕ್ರಮಗಳನ್ನು ಆರಭ ಮಾಡ ಲಾಗಿದ್ದು ಈ ಒಂದು ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ್ದಾರೆ.
ನಡ್ಡಾ ಅವರು ಗೋಡೆಯ ಮೇಲೆ ಪಕ್ಷದ ಚಿಹ್ನೆಯನ್ನು (ಕಮಲ) ಮತ್ತು ಕೆಳಗೆ ಬರೆದ ‘ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ ಘೋಷಣೆ ಯೊಂದಿಗೆ ವಿವರಿಸುವ ಮೂಲಕ ಬರವಣಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ನಮ್ಮ ಗೋಡೆ ಬರಹ ಕಾರ್ಯಕ್ರಮ ಇಂದಿನಿಂದ ದೇಶಾದ್ಯಂತ ಪ್ರಾರಂಭವಾಗುತ್ತಿದೆ.ದೇಶಾದ್ಯಂತ ಎಲ್ಲಾ ಬೂತ್ ಗಳಲ್ಲಿ ‘ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ (ಮತ್ತೊಮ್ಮೆ ಮೋದಿ ಸರ್ಕಾರ) ಎಂಬ ಘೋಷಣೆಯೊಂದಿಗೆ ಕಾರ್ಯ ಕ್ರಮ ಪ್ರಾರಂಭವಾಗಲಿದೆ ಎಂದು ನಡ್ಡಾ ಹೇಳಿದರು
ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವುದು ಮತ್ತು ಅದನ್ನು ಯಶಸ್ವಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ಈ ಘೋಷಣೆಯು 2024 ರಲ್ಲಿ ಮತ್ತೊಮ್ಮೆ ಮೋದಿ ಸರ್ಕಾರವನ್ನು ರಚಿಸಬೇಕು
ಮತ್ತು ದೇಶದಲ್ಲಿ ಸ್ಥಿರವಾದ ಅಭಿವೃದ್ಧಿ ನಡೆಯ ಬೇಕು ಎಂದು ರಾಷ್ಟ್ರದ ನಾಗರಿಕರಿಗೆ ವಿನಮ್ರ ಮನವಿಯಾಗಿದೆ ಎಂದು ಹೇಳುತ್ತಾ ಕರೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..






















