This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಕಲ್ಬುರ್ಗಿ

ಗಂಡು ಮಗುವಿಗೆ ಜನ್ಮ ನೀಡಿದ SSLC ವಿದ್ಯಾರ್ಥಿನಿ  – ಸಹೋದರ ಅರೆಸ್ಟ್ ಯಾರನ್ನು ನಂಬೊದು…..

WhatsApp Group Join Now
Telegram Group Join Now

ಕಲಬುರಗಿ

ಗಂಡು ಮಗುವಿಗೆ ಜನ್ಮ ನೀಡಿದ SSLC ವಿದ್ಯಾರ್ಥಿನಿ  ಸಹೋದರ ಅರೆಸ್ಟ್ ಯಾರನ್ನು ನಂಬೊದು ಹೌದು ಎಸ್​ಎಸ್​ಎಲ್​ಸಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ದೊಡ್ಡಪ್ಪನ ಮಗನ ಕಾರಣ ದಿಂದಾಗಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ ಈ ಒಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಸಂಬಂಧ ಕಲಬುರಗಿ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಅಡಿ ದೂರು ದಾಖಲಾಗಿದೆ.ಹಾಗೇ ಬಾಲಕಿ ಹಾಸ್ಟೇಲ್ ನಲ್ಲಿದ್ದರೂ ಗಮನಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಸತಿ ನಿಲಯದ ಪಾಲಕ ಸೇರಿ ಇಬ್ಬರನ್ನೂ ಅಮಾನತ್ತು ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಳಂದ ತಾಲೂಕಿನ ಗ್ರಾಮವೊಂ ದರ ವಸತಿ ಶಾಲೆಯಲ್ಲಿ ಇದ್ದ ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ಹೀಗಾಗಿ ಹಾಸ್ಟೇಲ್ ಸಿಬ್ಬಂದಿ ಬಾಲಕಿಯನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದರು. ಹೊಟ್ಟೆ ನೋವು ತೀವ್ರವಾದಾಗ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಪಾಲಕರು ಚಿಕಿತ್ಸೆ ಕೊಡಿಸಿ ದ್ದಾರೆ.ಸ್ಕ್ಯಾನಿಂಗ್ ನಲ್ಲಿ ಬಾಲಕಿ ಗರ್ಭಿಣಿಯಾಗಿ ರುವ ವಿಷಯ ಬಯಲಾಗಿದೆ.ಡಿಸೆಂಬರ್ 28 ರಂದು ಬಾಲಕಿಗೆ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ

ಈ ಸ್ಥಿತಿಯಿಂದ ಮಗಳ ಪರಿಸ್ಥಿತಿ ಕಂಡು ಹೆತ್ತವರು ಕಣ್ಣೀರು ಇಟ್ಟಿದ್ದಾರೆ. ಆಕೆಯ ಸಹೋದರ (ದೊಡ್ಡಪ್ಪನ ಮಗ) ಕಾರಣ ಎಂಬ ವಿಚಾರ ಹೆತ್ತವರಿಗೆ ಹೆಚ್ಚಿನ ನೋವು ತಂದಿದೆ. ಆಸ್ಪತ್ರೆ ಯವರ ಮಾಹಿತಿ ಮೇರೆಗೆ ಕಲಬುರಗಿ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು

ಬಾಲಕಿಯ ಈ ಸ್ಥಿತಿಗೆ ಕಾರಣವಾದ ಸಹೋದರ ಸಂಬಂಧಿ ಯುವಕನನ್ನು ಬಂಧಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..


Google News

 

 

WhatsApp Group Join Now
Telegram Group Join Now
Suddi Sante Desk