ಮಂಡ್ಯ –
ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ – ಕೊಲೆ ಮಾಡಿ ಮಣ್ಣಿನಲ್ಲಿ ಹೂತಾಕಾಗಿದ್ದ ದುಷ್ಕರ್ಮಿ ಗಳು ಹೌದು ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ಮಂಡ್ಯದಲ್ಲಿ ನಡೆದಿದೆ.ಹೌದು ಮಂಡ್ಯ ಜಿಲ್ಲೆಯ ಮೇಲು ಕೋಟೆಯಲ್ಲಿ ಈ ಒಂದು ಘಟನೆ ನಡೆದಿದೆ.28 ವರ್ಷದ ದೀಪಿಕಾ ಎಂಬಾಕೆ ಕೊಲೆಯಾದ ದುರ್ದೈವಿಯಾಗಿದ್ದು
ಕೊಲೆ ಮಾಡಿ ನಂತರ ದುಷ್ಕರ್ಮಿಗಳು ಮಣ್ಣಿನಲ್ಲಿ ಹೂತು ಹಾಕಿದ್ದಾರಂತೆ.ಇನ್ನೂ ಕೊಲೆಯಾದ ಮಹಿಳೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾಗಿದ್ದು ದೀಪಿಕಾ ಮೇಲು ಕೋಟೆಯ SET ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಶಾಲೆಗೆ ಹೋಗಿ ಆನಂತರ ದೀಪಿಕಾ ಜನೆವರಿ 20 ರಂದು ನಾಪತ್ತೆಯಾಗಿದ್ದರು.ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ದೂರನ್ನು ಕೂಡಾ ನೀಡಿದ್ದರು. ಇದರ ನಡುವೆ ಮೇಲೆಕೋಟೆಯ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಪತ್ತೆಯಾಗಿದೆ.ಇದೀಗ ಮಹಿಳೆ ಕೊಲೆ ಸಾಕಷ್ಟು ಅನುಮಾನಕ್ಕೆ ಕಾರಣ ವಾಗಿದೆ.
ಇನ್ನೂ ಸುದ್ದಿಯನ್ನು ತಿಳಿದ ಮಂಡ್ಯ ಎಸ್ಪಿ ಎನ್. ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.8 ವರ್ಷದ ಹಿಂದೆ ದೀಪಿಕಾ ಒಂದೇ ಊರಿನ ಲೋಕೇಶ್ ಜೊತೆ ಅರೇಂಜ್ ಮ್ಯಾರೇಜ್ ಆಗಿದ್ದರು.ದೀಪಿಕಾ ದಂಪತಿಗೆ 6 ವರ್ಷದ ಮಗು ಸಹ ಇದೆ.ದೀಪಿಕಾ ಕ್ಲಾಸ್ ಮುಗಿಸಿ ಬರ್ತಿದ್ದಾಗ ಪಾಂಡವಪುರದಲ್ಲಿದ್ದಾಗ ಸ್ಥಳೀಯರು ತಂದೆ ವೆಂಕಟೇಶ್ಗೆ ಫೋನ್ ಮಾಡಿ
ನಿಮ್ಮ ಸ್ಕೂಟರ್ ವರನಂದಮ್ಮ ದೇಗುಲ ಬಳಿ ನಿಂತಿದ ಅಂತಾ ಹೇಳಿದ್ದಾರೆ.ಕೂಡಲೇ ಸ್ಥಳಕ್ಕೆ ತಂದೆ ಸ್ನೇಹಿತರ ಜತೆ ಹೋಗಿ ಮಗಳ ಹುಡುಕಿದ್ದು ಎಷ್ಟೇ ಹುಡುಕಿದ್ರೂ ಮಗಳು ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.ಇದೇಲ್ಲದರ ನಡುವೆ ಬೆಟ್ಟದ ತಪ್ಪಿಲಿನಲ್ಲಿ ವಾಸನೆ ಬಂದ ಜಾಗದಲ್ಲಿ ಮಣ್ಣಿನ ರಾಶಿ ಪತ್ತೆಯಾಗಿತ್ತು.
ಬಗೆದು ನೋಡಿದಾಗ ದೀಪಿಕಾ ಶವ ಪತ್ತೆ ಯಾಗಿದೆ.ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಶವ ವಶಕ್ಕೆ ಪಡೆದಿದ್ದಾರೆ ಸಧ್ಯ ಈ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ದೀಪಿಕಾ ಫೋನ್ ಕಾಲ್ ಡಿಟೇಲ್ಸ್ ಪತ್ತೆ ಮಾಡು ತ್ತಿದ್ದು ಲಾಸ್ಟ್ ಕಾಲ್ ಮಾಡಿದ್ದವರ ಸಂಪರ್ಕಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಡ್ಯ…..